ಮಂಗಳವಾರ, ಜುಲೈ 5, 2022
21 °C

ಅಂಬೇಡ್ಕರ್ ಶ್ರೇಷ್ಠ ನಾಯಕ; ಅಭಿನವ ಶಿವಲಿಂಗ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಶೋಷಿತ, ಹಿಂದುಳಿದ ವರ್ಗ ಹಾಗೂ ಮಹಿಳೆಯರ ಹಿತಕ್ಕಾಗಿ ಹೋರಾಡಿದ ನಾಯಕರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಶ್ರೇಷ್ಠರಾದವರು ಎಂದು ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಮೇಲು-ಕೀಳು, ಬಡವ ಶ್ರೀಮಂತ ಎಂಬ ತಾರತಮ್ಯ ಇಲ್ಲ. ಆದರೆ, ಸಂವಿಧಾನದ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜಕೀಯ ಇಚ್ಛಾಶಕ್ತಿ ನಾಯಕರಲ್ಲಿ ಕಡಿಮೆಯಾಗಿದೆ. ಜಯಂತಿಗಳು ಕೇವಲ ಆಚರಣೆಗಳು ಆಗದೆ, ಮಹಾತ್ಮರ ಚಿಂತನೆಗಳು ಜಾರಿಗೆ ಸ್ಫೂರ್ತಿಯಾಗಬೇಕು ಎಂದರು

ಉಪನ್ಯಾಸಕ ಸಂತೋಷ ಜಕಾಪುರೆ ಮಾತನಾಡಿ, ಶಿಕ್ಷಣವು ಶೋಷಿತರ ಬದುಕನ್ನು ಪರಿವರ್ತಿಸುವ ಸಾಧನ. ವಿದ್ಯೆಯ ಮೂಲಕ ಶೋಷಿ ತರನ್ನು ಸ್ವಾಭಿಮಾನಿಗಳಾಗಿ ರೂಪ ಗೊಳಿಸಬಹುದು ಎಂದು ಹೇಳಿದರು.

ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಚಂದ್ರಶಾ ಕಂಬಾರ, ಮಲ್ಲಿಕಾರ್ಜುನ ಸಗುಮಳೆ, ರಾಜಕುಮಾರ ಜಂಡೆ, ಆನಂದಯ್ಯ ಸ್ವಾಮಿ, ಶರಣಬಸಪ್ಪ ಜಕಾಪುರೆ, ವಿಜಯಕುಮಾರ ಪಾಟೀಲ, ಸಿದ್ದರಾಮ ತಳಕೇರಿ, ಬಸವರಾಜ ಕೋಳಿ, ಅಪ್ಪಾರಾವ ಸಗಮುಳೆ, ರಾಜು ಸಿಂಗೆ, ಅಂಬರೀಷ ಮೈಂದರ್ಗಿ, ಸಿದ್ದರಾಮ ಮುಂದಿನಕೇರಿ, ಮರೆಪ್ಪ ತಳಕೇರಿ, ಸೂರ್ಯಕಾಂತ ಮುಂದಿನಕೇರಿ, ಕಲ್ಯಾಣಿ ತಳಕೇರಿ, ಶ್ರೀಶೈಲ ಸೊನ್ನಕಾಂಬಳೆ ಇದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಜರುಗಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು