ಕಲಬುರಗಿ: ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಕರೆ ತರುತ್ತಿದ್ದ ಆಂಬುಲೆನ್ಸ್ ಅಪಘಾತಕ್ಕೀಡಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಬಾಬುರಾವ–ಅನಿತಾ ದಂಪತಿಯ ಪುತ್ರಿ ರಾಧಿಕಾ (16) ಮೃತ ದುರ್ದೈವಿ.

ಈ ದಂಪತಿಗೆ ಇಬ್ಬರು ಮಕ್ಕಳು. ಒಬ್ಬ ಮಗ, ಮತ್ತೊಬ್ಬ ಮಗಳು. ಮಗಳು ರಾಧಿಕಾ ಜ್ವರದಿಂದ ಬಳಲುತ್ತಿದ್ದಳು. ಅವಳನ್ನು ಚಿಕಿತ್ಸೆಗಾಗಿ ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಬಳಿಕ ‘108’ ಆಂಬುಲೆನ್ಸ್ನಲ್ಲಿ ಸ್ಟಾಫ್ ನರ್ಸ್ ಶಿವಮ್ಮ ಹಾಗೂ ಈ ದಂಪತಿಯು ರಾಧಿಕಾಳನ್ನು ಕಲಬುರಗಿಯ ಜಿಮ್ಸ್ಗೆ ಕರೆತರುತ್ತಿದ್ದರು. ಈ ವೇಳೆ ಆಳಂದ–ಕಲಬುರಗಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ.

ಅಪಘಾತದ ಹೊಡೆತಕ್ಕೆ ಆಂಬುಲೆನ್ಸ್ನಲ್ಲಿ ಮಲಗಿದ್ದ ರಾಧಿಕಾ ಪುಟಿದು ನೆಲದ ಮೇಲೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಅವಘಡದಲ್ಲಿ ಆಂಬುಲೆನ್ಸ್ ಚಾಲಕ, ಬಾಲಕಿಯ ತಂದೆ, ತಾಯಿ ಹಾಗೂ ಸ್ಟಾಫ್ ನರ್ಸ್ ಗಾಯಗೊಂಡಿದ್ದಾರೆ.

ಕಲಬುರಗಿ ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.