ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಿ, ಸುರೇಶ ಸೇರಿ ಏಳು ಜನರಿಗೆ `ಅಮ್ಮ ಪ್ರಶಸ್ತಿ’

ಸೇಡಂನಲ್ಲಿ ನ.26ಕ್ಕೆ ಪ್ರಶಸ್ತಿ ಪ್ರದಾನ, ತಲಾ ₹ 5 ಸಾವಿರ ನಗದು
Last Updated 12 ನವೆಂಬರ್ 2020, 13:18 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ ಸಿರನೂರಕರ್, ನದೀಂ ಸನದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಆಯ್ಕೆಯಾಗಿವೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್, ಭಾರತಿ ಹೆಗಡೆ ಅವರ ‘ಸೀತಾಳೆದಂಡೆಯ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ ‘ಹಾಡು ಕಲಿಸಿದ ಹರ’ (ಸಂಸ್ಕೃತಿ ಸಂಕಥನ), ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ ‘ಹುಲಿಯ ನೆತ್ತಿಯ ನೆರಳು’ ಮತ್ತು ಡಾ. ಸತ್ಯಮಂಗಲ ಮಹಾದೇವ ಅವರ ‘ಪಂಚವರ್ಣದ ಹಂಸ’ (ಕವನ ಸಂಕಲನ) ಕೃತಿಗಳನ್ನು 20ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ಪ್ರಶಸ್ತಿಯು ₹ 5 ಸಾವಿರ ನಗದು, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಕಾವ್ಯ ವಿಭಾಗದಲ್ಲಿ ಇಬ್ಬರು ಕವಿಗಳು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದೇ 26ರಂದು ಸಂಜೆ 5.30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಬಾರಿ 391 ಕೃತಿಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT