ಚಿಂಚೋಳಿ: ತಾಲ್ಲೂಕಿನ ಅಣವಾರ ಗ್ರಾಮದ ಆರಾಧ್ಯದೈವ ಮಾರುತೇಶ್ವರ ಜಾತ್ರೆ ಅಂಗವಾಗಿ ಏ.2ರಂದು ಸಂಜೆ 6.30ಕ್ಕೆ ರಥೋತ್ಸವ ಜರುಗಲಿದೆ ಎಂದು ಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.

ಮಾ.29 ರಿಂದ ಜಾತ್ರೆ ಪ್ರಾರಂಭವಾಗಲಿದ್ದು, ಪ್ರತಿದಿನ ಸಂಜೆ 8ಕ್ಕೆ ಪಲ್ಲಕ್ಕಿ ಉತ್ಸವ, ಹನುಮಾನ ಚಾಲಿಸಾ ಪಠಣ ನಡೆದಿದೆ.

ಏ.1ರಂದು ಸಂಜೆ 5ಕ್ಕೆ ಅಗ್ನಿಕುಂಡದ ಪೂಜೆ, ನೈವೇದ್ಯ ಅರ್ಪಣೆ ನಡೆಯಲಿದೆ. ಏ.2ರಂದು ಪುರವಂತರ ಜತೆಗೆ ಪಲ್ಲಕ್ಕಿ ಮೆರವಣಿಗೆ, ಅಗ್ಗಿ ತುಳಿಯುವುದು, ಮಾರುತೇಶ್ವರನಿಗೆ ರುದ್ರಾಭಿಷೇಕ, ಸಂಜೆ ರಥೋತ್ಸವ ಜರುಗಲಿದೆ.

ಚಂದಾಪುರ ಹನುಮನ ಪಲ್ಲಕ್ಕಿ ಉತ್ಸವ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿ ಪ್ರಯುಕ್ತ ಖಾಂಡ್ ಹಾಗೂ ಪಲ್ಲಕ್ಕಿ ಉತ್ಸವ ಏ.2ರಂದು ನಡೆಯಲಿದೆ.

ಬೆಳಿಗ್ಗೆ ಅಭಿಷೇಕ, ತೊಟ್ಟಿಲೋತ್ಸವ, ಮಹಾಪ್ರಸಾದ ಹಾಗೂ ಸಂಜೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ ಎಂದು ಅರ್ಚಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ಬೊಮ್ಮನಳ್ಳಿ: ಪಟ್ಟಣದ ಅಣವಾರ ರಸ್ತೆಯಲ್ಲಿರುವ ಬೊಮ್ಮನಳ್ಳಿಯ ಹನುಮಾನ ಮಂದಿರದಲ್ಲಿ ಏ.2ರಂದು ಹನುಮಾನ ಜಯಂತಿ ಕಾರ್ಯಕ್ರಮ ಖಾಂಡ್ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ರತ್ನಾಕರ್ ಸ್ವಾಮಿ ಮಿಠಾಯಿಗಾರ್ ತಿಳಿಸಿದ್ದಾರೆ.

ಐನೋಳ್ಳಿ: ತಾಲ್ಲೂಕಿನ ಐನೋಳ್ಳಿಯಲ್ಲಿ ಹನುಮಾನ ಜಾತ್ರಾ ಮಹೋತ್ಸವ ನಿಮಿತ್ತ ಏ.1ರಂದು ರಾತ್ರಿ ಸಂಗೀತ ದರ್ಬಾರ, ಏ.2 ರಂದು ಬೆಳಿಗ್ಗೆ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂದು ಅರ್ಚಕ ರಾಮಚಂದ್ರ ಜೋಷಿ ತಿಳಿಸಿದ್ದಾರೆ.

ರಥೋತ್ಸವದ ನಂತರ ಪಲ್ಲಕ್ಕಿ ಮೆರವಣಿಗೆ, ಮರುದಿನ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-31-67917994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.