ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪೂರೈಸದವರಿಗೆ ಗುವಿವಿ ಮತ್ತೊಂದು ಅವಕಾಶ

Last Updated 20 ಏಪ್ರಿಲ್ 2022, 4:35 IST
ಅಕ್ಷರ ಗಾತ್ರ

ಕಲಬುರಗಿ: ನಿಗದಿತ ಅವಧಿಯೊಳಗಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪೂರೈಸದೇ ಅನ್ನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆಗೆ ಹಾಜರಾಗಲು ಗುಲಬರ್ಗಾ ವಿಶ್ವವಿದ್ಯಾಲಯ ಅವಕಾಶ ನೀಡಿದೆ.

2011–12ರ ಶೈಕ್ಷಣಿಕ ಸಾಲಿನ ನಂತರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸದ ಪರೀಕ್ಷೆಗಳನ್ನು ನಾನ್‌ ಸಿಬಿಸಿಎಸ್‌ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳೆರಡನ್ನೂ ನಿಯಮಾನುಸಾರ ಅಳವಡಿಸಿಕೊಂಡು ನಡೆಸಲಾಗುವುದು. ಅದಲ್ಲದೇ, ಸೆಪ್ಟೆಂಬರ್, ಅಕ್ಟೋಬರ್ 2022ರಲ್ಲಿ ಜರುಗುವ ಪರೀಕ್ಷೆಗಳಲ್ಲಿ ಪದವಿ ಕೋರ್ಸಿನ ದ್ವಿತೀಯ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ಪರೀಕ್ಷೆ ಮತ್ತು ಸ್ನಾತಕೋತ್ತರ ಕೋರ್ಸಿನ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು. ಪರೀಕ್ಷೆ ಶುಲ್ಕ ಪಾವತಿಗೆ ಹಾಗೂ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ https://gug.ac.in ಸಂಪರ್ಕಿಸಬಹುದು ಎಂದು ಮೌಲ್ಯಮಾಪನ ಕುಲಸಚಿವರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT