ಸೋಮವಾರ, ಮೇ 23, 2022
30 °C
ಮಲ್ಲಣ್ಣಪ್ಪ ಮಹಾರಾಜರು, ಅಲ್ಲಮ‍ಪ್ರಭು, ಸುಲ್ತಾನ್ ಅಹ್ಮದ್ ಶಾಹವಲಿ ಜಾತ್ರಾ ಮಹೋತ್ಸವ

ಹಿಂದೂ–ಮುಸ್ಲಿಮರು ಒಂದಾಗಿ ಸಹಬಾಳ್ವೆ ನಡೆಸಿ: ಸಾಧ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ (ಕಲಬುರಗಿ ಜಿಲ್ಲೆ): ಹಿಂದೂ–ಮುಸ್ಲಿಂ ಭಾವೈಕ್ಯದ ತಾಣವಾಗಿರುವ ತೊನಸನಹಳ್ಳಿ ಗ್ರಾಮದಂತೆ ದೇಶದಲ್ಲಿ ಹಿಂದೂ–ಮುಸ್ಲಿಂ ಸಮುದಾಯದವರು ಒಂದಾಗಿ ಕೂಡಿಕೊಂಡು ಸಹಬಾಳ್ವೆ ನಡೆಸಬೇಕು ಎಂದು ಕೇಂದ್ರ ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹೇಳಿದರು.

ಸೋಮವಾರ ತೊನಸನಹಳ್ಳಿ (ಎಸ್) ಗ್ರಾಮದ ಮಲ್ಲಣ್ಣಪ್ಪ ಮಹಾರಾಜರು, ಅಲ್ಲಮಪ್ರಭು ಹಾಗೂ ಸುಲ್ತಾನ್ ಅಹ್ಮದ್‌ ಶಾಹವಲಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿನ ಅಲ್ಲಮಪ್ರಭು ಹಾಗೂ ಸುಲ್ತಾನ್ ಅಹ್ಮದ್ ಶಾಹವಲಿ ಜಾತ್ರಾ ಮಹೋತ್ಸವ ನೋಡಿದರೆ ದೇಶದಲ್ಲಿ ಯಾವುದೇ ಧರ್ಮ ಜಾತಿಯ ಬಗ್ಗೆ ಅಶಾಂತಿ ಉಂಟಾಗಲಾರದು’ ಎಂದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ‘ತೊನಸನಹಳ್ಳಿ (ಎಸ್) ಗ್ರಾಮಕ್ಕೆ ಬಂದರೆ ಇಲ್ಲಿನ ಜನರು ಮೊದಲು ನಮಗೆ ಕುಡಿಯುವ ನೀರನ್ನು ಒದಗಿಸಿ ಎಂದು ಕೇಳುತ್ತಾರೆ. ಅದನ್ನು ಕೇವಲ ಇಪ್ಪತ್ತು ದಿನಗಳಲ್ಲಿ ಕಾಮಗಾರಿಯನ್ನು ಮುಗಿಸಿ ಇಲ್ಲಿನ ಶಾಶ್ವತ ಕುಡಿಯುವ ನೀರನ್ನು ಒದಗಿಸುತ್ತೇನೆ. ಮುಂದಿನ ದಿನಗಳಲ್ಲಿ ಮಠಕ್ಕೂ ಅನುದಾನ ಒದಗಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ತೊನಸನಹಳ್ಳಿ (ಎಸ್)ನ ಮಲ್ಲಣ್ಣಪ್ಪ ಮಹಾರಾಜರು ಹಾಗೂ ಮಹಾರಾಷ್ಟ್ರದ ಗುರುಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಸಂಸದ ಡಾ.ಉಮೇಶ ಜಾಧವ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಭಾರತೀಯ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯೆ ಅಮರೇಶ್ವರಿ ಚಿಂಚನಸೂರ, ಡಾ.ಸೌರಭ ಸ್ವಾಮೀಜಿ, ಕಿರುತೆರೆ ನಟಿ ಪಾರು, ಸಂಜೀವಕುಮಾರ ವಾಡೇಕಾರ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಭೀಮಣ್ಣ ಸಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್, ತಾ.ಪಂ. ಸದಸ್ಯ ಮಲ್ಲಣ್ಣ ಸಣಮೋ, ಕೋಲಿ ಸಮಾಜದ ಅಧ್ಯಕ್ಷ ಶಿವು ತಳವಾರ, ಸಂಗೀತಾ ದೇವೆಂದ್ರ ಕಾರೊಳ್ಳಿ, ತೊನಸನಹಳ್ಳಿ (ಎಸ್) ಗ್ರಾ.ಪಂ. ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಭೋ, ಉಪಾಧ್ಯಕ್ಷೆ ರೇಷ್ಮಾ ಮಲ್ಲಿನಾಥ ಕರಣಿಕ್ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು