ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನ ಮಂಥನ ಕಾರ್ಯಾಗಾರ: ಕರ್ನಾಟಕ ಲಲಿತಾ ಕಲಾ ಅಕಾಡೆಮಿ

ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಯೋಜನೆ
Last Updated 21 ಅಕ್ಟೋಬರ್ 2021, 8:30 IST
ಅಕ್ಷರ ಗಾತ್ರ

ಕಲಬುರಗಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಜೀಂ ಪ್ರೇಮ್‌ಜೀ ಫೌಂಡೇಷನ್ ಹಾಗೂ ಕರ್ನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ ಸಂಘದ ಸಹಯೋಗದಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ನಗರದ ಆಳಂದ ರಸ್ತೆಯ ಅಜೀಂ ಪ್ರೇಮ್‌ಜೀ ಫೌಂಡೇಷನ್‌ ಸಭಾಂಗಣದಲ್ಲಿ ಗುರುವಾರದಿಂದ ಶನಿವಾರದವರೆಗೆ (ಅ.21 ರಿಂದ 23) ರಾಜ್ಯ ದೃಶ್ಯಕಲಾ ಅಧ್ಯಾಪಕರ ಚಿಂತನ ಮಂಥನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

‘ಹೊಸ ಸಾಧ್ಯತೆಗಳು ಹೊಸ ಪರಿಕಲ್ಪನೆಗಳು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ ದೃಶ್ಯಕಲಾ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ದೃಶ್ಯ ಕಲಾ ಕಾಲೇಜುಗಳ ಅಧ್ಯಾಪಕರಿಗಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಡಿ. ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಮಾ ಅರ್ಕಸಾಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಾಗಾರದಲ್ಲಿ 80 ಪ್ರಾಧ್ಯಾಪಕರು ಪಾಲ್ಗೊಂಡು ದೃಶ್ಯಕಲೆ ಕುರಿತು ಚರ್ಚಿಸುವರು. ಇದರೊಂದಿಗೆ ವಿಷಯ ಮಂಡನೆ, ಸಂವಾದ, ಚಲನಚಿತ್ರ ವೀಕ್ಷಣೆ ಮುಂತಾದ ಚಟುವಟಿಕೆಗಳು ನಡೆಯಲಿವೆ’ ಎಂದರು.

ಅ.21ರಂದು ಬೆಳಿಗ್ಗೆ 10.30ಕ್ಕೆ ಎನ್‌ಜಿಎಂಎ ಮಹಾ ನಿರ್ದೇಶಕ ಅದ್ವೈತ್ ಗದಾನಾಯಕ್ ಅವರು ಕಾರ್ಯಾಗಾರ ಉದ್ಘಾಟಿಸುವರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮಧ್ಯಾಹ್ನ 12ರವರೆಗೆ ಪರಿಚಯಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2ರಿಂದ 3.30ರ ವರೆಗೆ ‘ಕಲಾ ಶಿಕ್ಷಣದ ಸ್ಥಿತಿಗತಿ’ ವಿಷಯದ ಬಗ್ಗೆ ಕಲಾವಿದರಾದ ಪ್ರೊ.ಅಂದಾನಿ ವಿ.ಜಿ ಹಾಗೂ ಚಿ.ಸು.ಕೃಷ್ಣಶೆಟ್ಟಿ ವಿಚಾರ ಮಂಡಿಸುವರು. ಸಂಜೆ 4ರಿಂದ ‘ಹೊಸ ಶಿಕ್ಷಣ ನೀತಿ ಮತ್ತು ಕಲೆ’ ಎಂಬ ವಿಷಯದ ಬಗ್ಗೆ ಅಜೀಂ ಪ್ರೇಮ್‌ಜೀ ಫೌಂಡೇಷನ್ ಕಲ್ಯಾಣ ಕರ್ನಾಟಕ ಘಟಕದ ಮುಖ್ಯಸ್ಥ ರುದ್ರೇಶ್ ಎಸ್. ವಿಚಾರ ಮಂಡಿಸುವರು. ಸಂಜೆ 7ಕ್ಕೆ ಶಿಬಿರಾರ್ಥಿಗಳೊಂದಿಗೆ ಸಂವಾದ ಜರುಗಲಿದೆ.

ಅ.22ರ ಬೆಳಿಗ್ಗೆ 9.30ಕ್ಕೆ ಕಲಾವಿದ ಹರಿರಾಮ್ ಅವರು ‘ಅಮೂರ್ತತೆಯ ಗುಣಲಕ್ಷಣಗಳು’ ವಿಷಯದ ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ಉಪನ್ಯಾಸ ನೀಡುವರು. ಮಧ್ಯಾಹ್ನ 2ಕ್ಕೆ ಸಂಪನ್ಮೂಲ ವ್ಯಕ್ತಿ
ಶಿವಕುಮಾರ ಎಂ. ಅವರು ‘ತರಗತಿ ಬದಲಾವಣೆಗಾಗಿ ಕಾಮಿಕ್ಸ್‌ ಚಿತ್ರಗಳು’ ವಿಷಯದ ಬಗ್ಗೆ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ಅಂತರರಾಷ್ಟ್ರೀಯ ಕಲಾವಿದರಾದ ಜಿ.ಆರ್‌.ಈರಣ್ಣ, ರಂಜನಿ ಶೆಟ್ಟರ್ ಅವರೊಂದಿಗೆ ಸಂವಾದ, ಸಂಜೆ 7ಕ್ಕೆ ಚಲನಚಿತ್ರ ಪ್ರದರ್ಶನ ಇರಲಿದೆ.

ಅ.23ರ ಬೆಳಿಗ್ಗೆ 11.30ಕ್ಕೆ ಐತಿಹಾಸಿಕ ಸ್ಥಳಗಳು ಹಾಗೂ ಶೈಕ್ಷಣಿಕ ಪ್ರವಾಸದ ಬಗ್ಗೆ ಅಂಕಣಕಾರರಾದ ಗೀರ್ವಾಣಿ ಹಾಗೂ ಮಧ್ಯಾಹ್ನ 2ಕ್ಕೆದೃಶ್ಯಕಲೆ ಬಗ್ಗೆ ಕಲಾ ಇತಿಹಾಸಕಾರರಾದ ಪ್ರೊ.ದೀಪಕ್ ಕನ್ಹಾಲ್ ಮತ್ತು ರಾಘವೇಂದ್ರ ಕುಲಕರ್ಣಿ ಅವರು ಉಪನ್ಯಾಸ ನೀಡುವರು. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT