ಗುರುವಾರ , ನವೆಂಬರ್ 21, 2019
22 °C

ವಿದ್ಯಾರ್ಥಿನಿಗೆ ಕಿರುಕುಳ; ಉಪನ್ಯಾಸಕನ ಮೇಲೆ ಹಲ್ಲೆ

Published:
Updated:

ಕಲಬುರ್ಗಿ: ನಗರದ ಖಾಸಗಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್‌ ವಿಭಾಗದ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿನಿ ಕಡೆಯವರು ತರಗತಿಗೆ ನುಗ್ಗಿ ಉಪನ್ಯಾಸಕನ ಹಲ್ಲೆ ನಡೆಸಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಉಪನ್ಯಾಸಕ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿದ್ಯಾರ್ಥಿನಿ ತನ್ನ ಕುಟುಂಬ ಸದಸ್ಯರ ಎದುರು ಬಹಿರಂಗಪಡಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮೂವರು ಯುವಕರು ಕೊಠಡಿಗೆ ತೆರಳಿ ತರಗತಿ ನಡೆಯುತ್ತಿರುವಾಲೇ ಉಪನ್ಯಾಸಕನ ಕಪಾಳಿಗೆ ಏಟು ಕೊಟ್ಟಿದ್ದಾರೆ.  ಏನು ತಪ್ಪು ಮಾಡಿದ್ದೀಯಾ ಹೇಳು ಎಂದೂ ಪ್ರಶ್ನಿಸಿ ಉತ್ತರ ಪಡೆಯುತ್ತಾರೆ. ತಪ್ಪಿಗಾಗಿ ಕೊಠಡಿಯಲ್ಲಿಯೇ ವಿದ್ಯಾರ್ಥಿನಿಯರ ಎದುರು ಕ್ಷಮೆ ಕೇಳುವಂತೆ ಪಟ್ಟು ಹಿಡಿದ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ತರಗತಿ ಮುಗಿಸಿ ಕಚೇರಿಗೆ ತೆರಳಿದಾಗ ಅಲ್ಲಿಗೂ ಹಿಂಬಾಲಿಸಿದ ಗುಂಪು ಮತ್ತೊಮ್ಮೆ ಥಳಿಸಿದೆ. ಇದು ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆಯೇ ಉಪನ್ಯಾಸಕನನ್ನು ಹುದ್ದೆಯಿಂದ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಹಲ್ಲೆಗೆ ಸಂಬಂಧಿಸಿದಂತೆ ಎರಡು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. 

ಪ್ರತಿಕ್ರಿಯಿಸಿ (+)