ಪೊಲೀಸರ ಮೇಲೆ ಹಲ್ಲೆ ಮಾಡಿದಆರೋಪಿ: ದೂರು ದಾಖಲು

7
ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಪೊಲೀಸರ ಮೇಲೆ ಹಲ್ಲೆ ಮಾಡಿದಆರೋಪಿ: ದೂರು ದಾಖಲು

Published:
Updated:

ಕಲಬುರ್ಗಿ: ಹೈದರಾಬಾದ್‌ಗೆ ತೆರಳಿರುವ ಪೊಲೀಸ್ ಸಿಬ್ಬಂದಿ ಮೇಲೆ, ಕೊಲೆ ಆರೋಪಿ ಮುಸ್ತಫಾ ಮಹ್ಮದ್ ಸಲೀಂ ಹಲ್ಲೆ ಮಾಡಿದ್ದು, ಹೈದರಬಾದ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ.

‘ಖಚಿತ ಮಾಹಿತಿ ಆಧರಿಸಿ ಇಬ್ಬರು ಸಬ್‌ ಇನ್‌ಸ್ಪೆಕ್ಟರ್ ಹಾಗೂ ಏಳು ಜನ ಕಾನ್‌ಸ್ಟೆಬಲ್‌ಗಳಿದ್ದ ತಂಡ ಹೈದರಾಬಾದ್‌ಗೆ ತೆರಳಿತ್ತು. ಈ ವೇಳೆ ಆತನ ಜಾಡು ಹಿಡಿದು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಹಲ್ಲೆ ಮಾಡಿದ ಬಳಿಕ ಹೈದರಾಬಾದ್‌ನಿಂದ ನಿಜಾಮಾಬಾದ್, ಮುಂಬೈ ಮಾರ್ಗವಾಗಿ ಅಜ್ಮೇರ್‌ಗೆ ತೆರಳಿದ್ದಾನೆ. ನಮ್ಮ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಶೀಘ್ರವೇ ಬಂಧಿಸಲಾಗುವುದು’ ಎಂಬುದು ಮೂಲಗಳ ಹೇಳಿಕೆ. ತಂಗಿಗೆ ಕಿರುಕುಳ ನೀಡದಂತೆ ಮೃತ ಸೈಯದ್ ಅಕ್ಬರ್ ಬುದ್ಧಿವಾದ ಹೇಳಿದ್ದರಿಂದ ಕುಪಿತಗೊಂಡ ಅಳಿಯ, ಆರೋಪಿ ಮುಸ್ತಫಾ ಮಹ್ಮದ್ ಸಲೀಂ ಜು.4ರಂದು ಬೆಳಿಗ್ಗೆ 2.30 ಗಂಟೆ ಸುಮಾರಿಗೆ ಸೀಮೆ ಎಣ್ಣೆ ಸುರಿದು ಮಾವನ ಮನೆಗೆ ಬೆಂಕಿ ಹಚ್ಚಿದ್ದರು.

ತೀವ್ರ ಸುಟ್ಟ ಗಾಯಗಳಾಗಿದ್ದ ಸೈಯದ್ ಅಕ್ಬರ್ (42), ಅವರ ಪತ್ನಿ ಶಹನಾಜ್ ಬೇಗಂ (35) ಅವರು ಬಸವೇಶ್ವರ ಆಸ್ಪತ್ರೆಯಲ್ಲಿ ಹಾಗೂ ಪುತ್ರಿ ಸಾನಿಯಾ ಬೇಗಂ (17) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರ ಸೈಯದ್ ಯಾಸಿನ್‌ಗೆ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !