ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿ ಮಂಜೂರಿಗೆ ಯತ್ನ: ಶಾಸಕ ಡಾ. ಅವಿನಾಶ ಜಾಧವ

ಐನಾಪುರ ಸುತ್ತಲಿನ ರೈತರ ಬಹುದಿನಗಳ ಬೇಡಿಕೆ
Last Updated 14 ಫೆಬ್ರುವರಿ 2022, 5:18 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐನಾಪುರ ಸುತ್ತಲಿನ ರೈತರ ಬಹುದಿನಗಳ ಬೇಡಿಕೆಯಾಗಿರುವ ಐನಾಪುರ ಏತ ನೀರಾರಿ ಯೋಜನೆ ಮಂಜೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಮುಂಬರುವ ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಒದಗಿಸಲು ಕೋರಿದ್ದೇನೆ’ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.

ತಾಲ್ಲೂಕಿನ ಐನಾಪುರ ಗ್ರಾ.ಪಂ. ವ್ಯಾಪ್ತಿಯ ಭೂಂಯಾರ್(ಕೆ) ಗ್ರಾಮದ ಫತ್ತು ನಾಯಕ ತಾಂಡಾದ ಬಳಿ ಮುಲ್ಲಾಮಾರಿ ನದಿಗೆ ಎರಡು ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

₹350 ಕೋಟಿ ಮೊತ್ತದ ಕೆರೆ ತುಂಬುವ ಯೋಜನೆ ವಿಸ್ತೃತ ಯೋಜನೆ ತಯಾರಿಗೆ ₹50 ಲಕ್ಷ ಮಂಜೂರಾಗಿದೆ ಇದಕ್ಕೂ ಅನುದಾನ ಮಂಜೂರಿಗೆ ಆದ್ಯತೆ ನೀಡುವೆ. ಐನಾಪುರ ಗ್ರಾ.ಪಂ. ಒಂದರಲ್ಲಿಯೇ 5 ಬ್ರಿಜ್ ಕಂ ಬ್ಯಾರೇಜ್ ಮಂಜೂರು ಮಾಡಿಸಿದ್ದು ಈಗಾಗಲೇ 3 ಕಾಮಗರಿ ಪೂರ್ಣವಾಗಿ ಉದ್ಘಾಟಿಸಲಾಗಿದೆ ಎಂದರು.

ಫತ್ತು ನಾಯಕ ತಾಂಡಾದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸರ್ಕಾರಿ ಶಾಲೆ ಮಂಜೂರಾಗಿಲ್ಲ ಇಲ್ಲಿ ಡಯಸ್ ಕೋಡ್ ಸಮಸ್ಯೆ ಇರುವುದರಿಂದ ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾ,ಪಂ ಮಾಜಿ ಅಧ್ಯಕ್ಷ ಈಶ್ವರ್ ನಾಯಕ, ಶಾಮರಾವ್ ರಾಠೋಡ್, ಪ್ರೇಮಸಿಂಗ್ ಜಾಧವ, ಮುಖಂಡ ಅಲ್ಲಮಪ್ರಭು ಹುಲಿ, ಗ್ರಾ.ಪಂ. ಲಕ್ಷ್ಮಣ ರಾಠೋಡ್, ಬನ್ಸಿಲಾಲ್ ಚಿನ್ನಾ ರಾಠೋಡ್ ಮಾತನಾಡಿದರು.

ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಶಾಂತುರೆಡ್ಡಿ ನರನಾಳ್, ಡಾ. ವಿಠಲರಾವ್ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಉಮ್ಲಿಬಾಯಿ ಬನ್ಸಿಲಾಲ್ ಚಿನ್ನಾ ರಾಠೋಡ್, ಉಪಾಧ್ಯಕ್ಷ ಸಂಜೀವ ಡೊಂಗರಗಿ, ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಶರಣಪ್ಪ ಕೇಶ್ವಾರ, ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಗಡಿಲಿಂಗದಳ್ಳಿ ಗ್ರಾ.ಪಂ. ಅಧ್ಯಕ್ಷ ಗೌರಿಶಂಕರ ಉಪ್ಪಿನ್, ರಮೇಶ ಪಡಶೆಟ್ಟಿ ಇದ್ದರು.

ಫತ್ತು ನಾಯಕ ತಾಂಡಾದಲ್ಲಿ ನೀರಿನ ಸಮಸ್ಯೆ ನಿವಾರಿಸುವುದರ ಜತೆಗೆ ಸರ್ಕಾರಿ ಶಾಲೆ ಮಂಜೂರು ಮಾಡಿಸಬೇಕು. ತಾಂಡಾದಿಂದ ಬೇಟೆಗಾರ ತಾಂಡಾದವರೆಗೆ ಕಚ್ಚಾ ರಸ್ತೆ ನಿರ್ಮಿಸಿಬೇಕೆಂದು ಗ್ರಾ.ಪಂ. ಸದಸ್ಯ ಲಕ್ಷ್ಮಣ ರಾಠೋಡ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT