ಮಂಗಳವಾರ, ಜೂನ್ 22, 2021
28 °C

ಮಾರಕಾಸ್ತ್ರಗಳಿಂದ ಹೊಡೆದು ಆಟೊ ಚಾಲಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕಲಬುರ್ಗಿ: ನಗರದ ಆಟೊ ಚಾಲಕನನ್ನು ಪತ್ನಿಯ ಸಹೋದರನೇ ಮಾರಕಾಸ್ತ್ರಗಳಿಂದ ಭಾನುವಾರ ಕೊಲೆ ಮಾಡಿದ್ದಾನೆ.

ಮೊಹಮ್ಮದ್ ಬಾಬಾ ಅಲಿಯಾಸ್ ಬಂಡಿ ಬಾಬಾ ಮೃತ ಆಟೊ ಚಾಲಕ.

ಮೊಹಮ್ಮದ್ ಬಾಬಾ ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಬಾಬಾನ ಪತ್ನಿ ತನ್ನ ಸಹೋದರ ಚಾಂದ್‌ನನ್ನು ಕರೆದಳು. ಸ್ಥಳಕ್ಕೆ ಬಂದ ಚಾಂದ್ ಜಗಳ ಬಿಡಿಸುವ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ.

ತೀವ್ರ ಗಾಯಗೊಂಡ ಮೊಹಮ್ಮದ್ ಬಾಬಾ ಮೃತಪಟ್ಟಿದ್ದಾನೆ. ನಂತರ ಚಾಂದ್ ಪೊಲೀಸರಿಗೆ ‌ಶರಣಾಗಿದ್ದಾನೆ ಎಂದು ಡಿಸಿಪಿ‌ ಡಿ. ಕಿಶೋರಬಾಬು ತಿಳಿಸಿದ್ದಾರೆ.

ಮೊಹಮ್ಮದ್ ಬಾಬಾ ವಿರುದ್ಧ 2019ರಲ್ಲಿ ಚೌಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು