ಆರು ಜನ ಸಾಧಕರಿಗೆ ‘ಅವ್ವ’ ಪ್ರಶಸ್ತಿ

7

ಆರು ಜನ ಸಾಧಕರಿಗೆ ‘ಅವ್ವ’ ಪ್ರಶಸ್ತಿ

Published:
Updated:

ಕಲಬುರ್ಗಿ: ತಾಲ್ಲೂಕಿನ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಅವ್ವ ಪ್ರಶಸ್ತಿ’ಗೆ ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಎ.ಜಿ.ರತ್ನ ಕಾಳೇಗೌಡ ಅವರ ‘ಅಂತರಂಗದ ಹಣತೆ’ ಕಥಾ ಸಂಕಲನ, ಕಾರವಾರದ ಪತ್ರಿಕಾ ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ‘ಅವಳು ಎಂದರೆ’ ಅಂಕಣ ಬರಹ, ಬೀದರ್‌ನ ವಿಜಯಲಕ್ಷ್ಮೀ ಕೌಟಗೆ ಅವರ ‘ಕಲ್ಯಾಣ ಕದಳಿ’ ಕಾದಂಬರಿ, ಯಾದಗಿರಿಯ ಡಾ. ಬಸವರಾಜ ಕಲೆಗಾರ ಅವರ ‘ಸುಡುವ ನೆಲದ ದೃಶ್ಯ ಕಾವ್ಯ’ ಕೃತಿಗಳಿಗೆ ‘ಅವ್ವ’ ಪ್ರಶಸ್ತಿ ಲಭಿಸಿದೆ.

ಮಧುಮಾಲಾ ಬಿ.ಲಿಗಾಡೆ ಅವರ ‘ಸಮಗ್ರ ಸಾಹಿತ್ಯ’ ಮತ್ತು ಶ್ರೀನಿವಾಸ ಸಿರನೂರಕರ್ ಅವರ ಪರ್ತಿಕೋದ್ಯಮದಲ್ಲಿನ ಸಾಧನೆಗಾಗಿ ‘ಅವ್ವ’ ಗೌರವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜ.27 ರಂದು ನಗರದಲ್ಲಿ ಜರುಗಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !