ಗುರುವಾರ , ಅಕ್ಟೋಬರ್ 21, 2021
27 °C

ಮನೆ ಕಟ್ಟುವುದಕ್ಕಿಂತ ಮಕ್ಕಳ ವ್ಯಕ್ತಿತ್ವ ನಿರ್ಮಿಸಿ: ಶಿವಾಚಾರ್ಯ ಸ್ವಾಮೀಜಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮನೆ ಕಟ್ಟುವುದಕ್ಕಿಂತ ಮಕ್ಕಳ ವ್ಯಕ್ತಿತ್ವ ನಿರ್ಮಿಸಿ. ಮಕ್ಕಳನ್ನು ಸರಿಯಾದ ವಿದ್ಯಾಭ್ಯಾಸ ಮಾಡಿಸುವುದರಿಂದ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಾರೆ. ಸಮಾಜವನ್ನು ಓಗ್ಗೂಡಿಸುವ ಕೆಲಸ ಮಾಡಬೇಕು ವಿನಃ ಒಡಿಯುವ ಕೆಲಸ ಮಾಡಬಾರದು’ ಎಂದು ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದಲ್ಲಿ ಕೊಲ್ಲಿಪಾಕಿ ಟ್ರಸ್ಟ್ ಹಾಗೂ ಮಹಾಗಾಂವದ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಸಂಘ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸೇವಾರ್ಥಿಗಳಿಗೆ ಸನ್ಮಾನಿಸುವುದು ಒಳ್ಳೆಯ ಬೆಳವಣಿಗೆ. ಕೆಲ ಸಂಘ– ಸಂಸ್ಥೆಗಳು ಇದನ್ನು ಮಾಡುತ್ತಿರುವುದು ನಮಗೆ ಸಂತೋಷವಾಗಿದೆ’ ಎಂದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಶಿವಾನಂದ ಬಸಣ್ಣ ಸುರಗಾಳಿ, ಕೇದಾರನಾಥ ಅಮೃತಪ್ಪ ಮಲಕಪ‍್ಪಗೌಡ, ಉದಯಚಂದ ಹಣಮಂತರಾವ ಓಕಳಿ, ಅಣ್ಣಾರಾವ್‌ ಸಂಗಾಣಿ, ಸಿದ್ರಾಮಪ್ಪ ಹತಗುಂದಿ, ಸಂಗಣಬಸಪ್ಪ ಸಂಗಾಣಿ, ರವಿಕಾಂತ ಹತಗುಂದಿ ಅವರನ್ನು ಸತ್ಕರಿಸಲಾಯಿತು.

ಬಸವರಾಜ ಕಿಣಗಿ, ಗುರುಪಾದಪ್ಪ ಕಿಣಗಿ, ಸಿದ್ರಾಮಪ್ಪ ಆಲಗೂಡಕರ್, ಸುಭಾಷಚಂದ್ರ ಮುಡಬಿ, ಶಿವಪುತ್ರ ಸರಡಗಿ, ಶಿವರಾಜ ಕರಾರೇ, ಲಿಂಗರಾಜ್ ಗುಂಡೂರಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.