‘ಮೃಗತ್ವ ದೂರ ಸರಿಸಿ; ಶಿವತ್ವ ಬೆಳೆಸಿಕೊಳ್ಳಿ’

7

‘ಮೃಗತ್ವ ದೂರ ಸರಿಸಿ; ಶಿವತ್ವ ಬೆಳೆಸಿಕೊಳ್ಳಿ’

Published:
Updated:
Deccan Herald

ಕಲಬುರ್ಗಿ: ನಮ್ಮಲ್ಲಿರುವ ಮೃಗತ್ವವನ್ನು ದೂರ ಸರಿಸಿ ಶಿವತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸಿದ್ಧಾರೂಢ ಮಠದ ಮಹೇಶ್ವರ ಗುರೂಜಿ ಹೇಳಿದರು.

ಇಲ್ಲಿಯ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ ನಡೆದ ಸದ್ಭಾವಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಬದುಕಿನಲ್ಲಿ ಪ್ರಸನ್ನತೆ, ಆನಂದ ಲಭಿಸಬೇಕಾದರೆ ಸಾಮಾನ್ಯ ಜೀವವು ಶಿವತ್ವವಾಗಬೇಕು. ಇದಕ್ಕೆ ಸದ್ಭಾವಗೋಷ್ಠಿ, ಚಿಂತನ-ಮಂಥನ ಅಗತ್ಯ. ಇಂತಹ ಸತ್ಕಾರ್ಯವನ್ನು ಬಬಲಾದಿ ಮಠ ಮಾಡುತ್ತಿದೆ ಎಂದು ಹೇಳಿದರು.

ಗುರುಪಾದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಚೇಂದ್ರನಾಥ ಮೂಲಗೆ ಮಾತನಾಡಿದರು.

ಹಣಮಂತರಾಯ ಅಟ್ಟೂರ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಗಮೇಶ ಹೂಗಾರ ಸ್ವಾಗತಿಸಿದರು. ದೇವಯ್ಯ ಗುತ್ತೇದಾರ ನಿರೂಪಿಸಿದರು. ಪ್ರಾಧ್ಯಾಪಕ ನಾಗರಾಜ ಹೆಬ್ಬಾಳ ವಂದಿಸಿದರು. ಚನ್ನಮ್ಮ ಜೀವಣಗಿ, ಸಿದ್ದು ಪಾಟೀಲ ಭಕ್ತಿಗೀತೆ ಹಾಡಿದರು.

ಗೋಷ್ಠಿಯಲ್ಲಿ ಬಸಯ್ಯ ಶಾಸ್ತ್ರಿ, ಶ್ರೀಶೈಲ ಗುಡೇದ, ಸಿದ್ದಣ್ಣ ಬಿರಾದಾರ ಸಿರಗಾಪುರ, ಶಿವಕುಮಾರ ಗಣಜಲಖೇಡ, ಮಹಾಲಿಂಗಪ್ಪ ಮೂಲಗೆ, ವೀರಯ್ಯ ಸ್ವಾಮಿ, ಬಾಬುರಾವ ಯಳಸಂಗಿ, ಪ್ರವೀಣಕುಮಾರ ಭೀಮಳ್ಳಿ, ಜಗನ್ನಾಥ ಸಜ್ಜನ, ವಸಂತ ಜಾಧವ, ವೀರಯ್ಯ ಸ್ವಾಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !