ಮಂಗಳವಾರ, ಮೇ 24, 2022
25 °C

ಬಿರುಗಾಳಿಗೆ ನೆಲಕ್ಕುರುಳಿದ 4 ಸಾವಿರ ಬಾಳೆ ಗಿಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸೋಮವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ತಾಲ್ಲೂಕಿನ ಸಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಪಾಳಾ ಗ್ರಾಮದಲ್ಲಿ 4 ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿವೆ.

ರೈತ ನಾಗರಾಜ ಮಗಿ ಎಂಬುವವರು ಮೂರು ಎಕರೆ ಜಮೀನಿನಲ್ಲಿ 4,500 ಬಾಳೆ ಗಿಡಗಳನ್ನು ಬೆಳೆದಿದ್ದರು. ರಾತ್ರಿ 8.30ರ ಸುಮಾರಿಗೆ ಬೀಸಿದ ಭಾರಿ ಬಿರುಗಾಳಿಯಿಂದಾಗಿ ಬಾಳೆ ಗಿಡಗಳು ತರಗೆಲೆಗಳಂತೆ ಉರುಳಿದವು.

’ಸುಮಾರು 300ರಿಂದ 400 ಬಾಳೆ ಗಿಡ ಅಷ್ಟೇ ಉಳಿದಿರಬಹುದು. ಇದಕ್ಕಾಗಿ ₹ 1.40 ಲಕ್ಷ ಖರ್ಚು ಮಾಡಿದ್ದೆವು’ ಎಂದು ರೈತ ನಾಗರಾಜ ತಿಳಿಸಿದರು.

ಕಂದಾಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಹಾನಿ ಪ್ರಮಾಣವನ್ನು ಪರಿಶೀಲಿಸಿದರು.

ವಿಮಾನ ನಿಲ್ದಾಣದ ಮುಂಭಾಗಕ್ಕೆ ಹಾನಿ: ಭಾರಿ ಬಿರುಗಾಳಿಗೆ ಕಲಬುರಗಿ ವಿಮಾನ ನಿಲ್ದಾಣದ ಮುಂಭಾಗದಲ್ಲಿದ್ದ ಕುರ್ಚಿಗಳು, ಬ್ಯಾನರ್‌ಗಳು ಕಿತ್ತು ಹೋಗಿವೆ. ಮೇಲ್ಭಾಗದಲ್ಲಿ ಅಳವಡಿಸಿದ್ದ ನಾಮಫಲಕವೂ ಹರಿದು ಹೋಗಿದ್ದು, ಬಿರುಗಾಳಿಗೆ ವಿಮಾನ ನಿಲ್ದಾಣವು ಸಿಲುಕಿಕೊಂಡಿರುವ ವಿಡಿಯೊಗಳನ್ನು ಕೆಲವರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.