ಬುಧವಾರ, ನವೆಂಬರ್ 13, 2019
23 °C

ವಿಲೀನ ಖಂಡಿಸಿ 22ರಂದು ಬ್ಯಾಂಕ್‌ ಮುಷ್ಕರ

Published:
Updated:

ಕಲಬುರ್ಗಿ: ಬ್ಯಾಂಕುಗಳ ವಿಲೀನ ಕ್ರಮದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು, ಕಟಬಾಕಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಗ್ರಾಹಕರ ಮೇಲೆ ಸೇವಾ ಶುಲ್ಕ ವಿಧಿಸಬಾರದು, ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಗುಲಬರ್ಗಾ ಜಿಲ್ಲಾ ಬ್ಯಾಂಕ್‌ ನೌಕರರ ಸಂಘವು ಇದೇ 22ರಂದು ಬೆಳಿಗ್ಗೆ 10ಕ್ಕೆ ಮುಷ್ಕರ ಹಮ್ಮಿಕೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್‌.ಚಂದ್ರಮೋಹನ್, ‘ಬೆಳಿಗ್ಗೆ ಸೂಪರ್‌ ಮಾರ್ಕೆಟ್‌ನಲ್ಲಿರುವ ಕೆನರಾ ಬ್ಯಾಂಕ್‌ನಿಂದ ಆರಂಭವಾಗುವ ನೌಕರರ ಮೆರವಣಿಗೆ ಜಗತ್‌ ವೃತ್ತದವರೆಗೆ ಬಂದು ಮರಳಿ ಸೂಪರ್‌ ಮಾರ್ಕೆಟ್‌ ತಲುಪಲಿದೆ. ಅಖಿಲ ಭಾರತ ನೌಕರರ ಸಂಘಟನೆ (ಎಐಬಿಇಎ), ಭಾರತೀಯ ಬ್ಯಾಂಕ್‌ ನೌಕರರ ಒಕ್ಕೂಟ (ಬಿಇಎಫ್‌ಐ) ಹಾಗೂ ಕರ್ನಾಟಕ ಪ್ರದೇಶ ಬ್ಯಾಂಕ್‌ ನೌಕರರ ಒಕ್ಕೂಟದ ಸಹಯೋಗದಲ್ಲಿ ಮುಷ್ಕರ ನಡೆಯಲಿದ್ದು,  ಎಸ್‌ಬಿಐ ಹೊರತುಪಡಿಸಿ ಉಳಿದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹಣಕಾಸು ವ್ಯವಹಾರಗಳು ನಡೆಯುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)