ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮೇ 27ಕ್ಕೆ ಬಸವ ಜಯಂತಿ ಆಚರಣೆ

ಚಿಂಚೋಳಿಯಲ್ಲಿ ಅದ್ದೂರಿ ಆಚರಣೆಗೆ ನಿರ್ಧಾರ
Last Updated 27 ಏಪ್ರಿಲ್ 2022, 3:57 IST
ಅಕ್ಷರ ಗಾತ್ರ

ಚಿಂಚೋಳಿ: ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಬಸವ ಜಯಂತ್ಯುತ್ಸವವನ್ನು ಮೇ 27ರಂದು ಅದ್ದೂರಿಯಾಗಿ ಆಚರಿಸಲು ಮಂಗಳವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಸವೇಶ್ವರ ಜಯಂತ್ಯುತ್ಸವ ಆಚರಣಾ ಸಮಿತಿಗೆ ಗೌರವ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೌತಮ ಪಾಟೀಲ, ಕಾರ್ಯಾಧ್ಯಕ್ಷರಾಗಿ ಶರಣು ಪಾಟೀಲ ಮೋತಕಪಳ್ಳಿ, ಕೋಶಾಧ್ಯಕ್ಷರಾಗಿ ಬಸವಣ್ಣ ಪಾಟೀಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಮುರುಡಾ, ಸೂರ್ಯಕಾಂತ ಹುಲಿ, ಉಮಾ ಪಾಟೀಲ, ನೀಲಕಂಠ ಸೀಳಿನ್, ಉದಯಕುಮಾರ ಪಾಟೀಲ, ಸಂಜೀವಕುಮಾರ ಪಾಟೀಲ, ಬಸವರಾಜ ಪುಣ್ಯಶೆಟ್ಟಿ, ಸಂಜೀವ ಪುಣ್ಯಶೆಟ್ಟಿ, ಭವಾನರಾವ್ ಫತೆಪುರ ಮೊದಲಾದವರು ಸಲಹೆ ಸೂಚನೆ ನೀಡಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ಮೇ 27ರಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಒಪ್ಪಿದ್ದಾರೆ ಎಂದು ಮಲ್ಲಿಕಾರ್ಜುನ ಪಾಲಾಮೂರ ತಿಳಿಸಿದರು.

ಸಭೆಯಲ್ಲಿ ರಾಜಶೇಖರ ಮುಸ್ತಾರಿ, ಗೋಪಾಲರೆಡ್ಡಿ ಗೋವಿಂದನೋರ್, ಜಗನ್ನಾಥ ಶೇರಿಕಾರ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಸತೀಶ ಇಟಗಿ, ವೀರಭದ್ರಪ್ಪ ಮಲಕೂಡ, ಸಂಗಯ್ಯಸ್ವಾಮಿ ಅಣವಾರ, ವೀರಶೆಟ್ಟಿ, ಗುಂಡಯ್ಯಸ್ವಾಮಿ, ಸಂತೋಷ ಜಾಬಶೆಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT