ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಕಾಯಕದಲ್ಲಿ ಹಾಸ್ಯ ಅಡಕ: ಗುಂಡಣ್ಣ ಡಿಗ್ಗಿ

Last Updated 27 ಏಪ್ರಿಲ್ 2022, 3:59 IST
ಅಕ್ಷರ ಗಾತ್ರ

ಸೇಡಂ: ‘ನಿತ್ಯ ಜೀವನದಲ್ಲಿ ನಾವು ಮಾಡುವ ಕಾಯಕ, ನಡೆ-ನುಡಿಗಳಲ್ಲಿ ಹಾಸ್ಯ ಅಡಗಿದೆ' ಎಂದು ಹಾಸ್ಯಕಲಾವಿದ ಗುಂಡಣ್ಣ ಡಿಗ್ಗಿ ಅಭಿಪ್ರಾಯಪಟ್ಟರು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಂಗೀತ ಸಂಜೆ ಮತ್ತು ಹಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗು ಹೃದಯವನ್ನು ಅರಳಿಸುತ್ತದೆ. ಮನಸ್ಸು ಬಿಚ್ಚಿ ನಕ್ಕುಬಿಟ್ಟಾಗ ರೋಗ ದೂರವಾಗುತ್ತದೆ ಎಂದ ಅವರು, ಮಮ್ಮಿ ಡ್ಯಾಡಿ ಸಂಸ್ಕೃತಿ ಬೇಡ, ಅಪ್ಪ ಅಮ್ಮ ಕಲಿಸಿ. ಅಮ್ಮನ ಮಡಿಲಿನ ಪ್ರೀತಿ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಯುವ ಜನತೆ ಅರ್ಥಮಾಡಿಕೊಂಡು ಜೀವನ ಸಾಗಿಸಬೇಕಿದೆ ಎಂದರು.

ವೀರಭದ್ರೇಶ್ವರ ಭಜನಾ ಮಂಡಳಿ ಮಾತೆಯರು, ವೀರೇಂದ್ರ ಭಂಟನಳ್ಳಿ, ಚನ್ನಬಸಪ್ಪ ಮೀನಹಾಬಾಳ ಸೇರಿದಂತೆ ಇನ್ನಿತವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಹಾಸ್ಯ ಕಲಾವಿದ ರಾಚಯ್ಯಸ್ವಾಮಿ ಖಾನಾಪೂರೆ ಜನರ ಮನ ರಂಜಿಸಿದರು‌.

ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಕಲ್ಯಾಣಪ್ಪ ಮಾಸ್ತರ್ ಇದ್ದರು. ನಾಗೀಂದ್ರಪ್ಪ ಡೊಳ್ಳಾ ಸ್ವಾಗತಿಸಿದರು. ರಾಚಣ್ಣ ಬಳಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT