ಸೋಮವಾರ, ಜುಲೈ 26, 2021
26 °C

ಕಲಬುರ್ಗಿ: ಬೀನ್ಸ್‌ ದುಪ್ಪಟು; ಈರುಳ್ಳಿ ಬೆಲೆ ಇಳಿಕೆ

ಕಿರಣ ನಾಯ್ಕನೂರ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ತರಕಾರಿ ಬೆಲೆ ಕೊಂಚ ಇಳಿಕೆಯಾಗಿದ್ದು, ಗ್ರಾಹಕರ ಖುಷಿಗೆ ಕಾರಣವಾಗಿದೆ.

ಕಳೆದ ವಾರದ ಬೆಲೆಗೆ ಹೋಲಿಸಿದರೆ ಈ ವಾರ ಹೀರೆಕಾಯಿ ಬೆಲೆ ಕುಸಿತ ಕಂಡಿದೆ. ಕಳೆದ ವಾರ  ಕೆ.ಜಿಗೆ ₹80ರಂತೆ ಮಾರಾಟವಾಗಿದ್ದ ಹೀರೆಕಾಯಿ ದರ ಈ ವಾರ ₹40ಕ್ಕೆ ಕುಸಿದಿದೆ. ಆಲೂಗಡ್ಡೆ ಬೆಲೆಯಲ್ಲೂ ₹20 ಇಳಿಕೆಯಾಗಿದ್ದು ₹20ಕ್ಕೆ ಮಾರಲಾಗುತ್ತಿದೆ.  ಈರುಳ್ಳಿ ಬೆಲೆ ಈ ವಾರ ₹10 ಕಡಿಮೆಯಾಗಿದ್ದು ಕೆ.ಜಿಗೆ ₹30ಗೆ ಮಾರಾಟವಾಗುತ್ತಿದೆ.

ಟೊಮೆಟೊ ಬೆಲೆ ₹10 ಕಡಿಮೆಯಾಗಿದ್ದು, ಕೆ.ಜಿಗೆ ₹ 20ರಂತೆ ಮಾರಾಟವಾಗುತ್ತಿದೆ. ಹಾಗಲಕಾಯಿ ಮತ್ತು ಬೆಂಡೆಕಾಯಿ ಬೆಲೆಯಲ್ಲಿ ₹20 ಕಡಿಮೆಯಾಗಿದೆ. ಕ್ರಮವಾಗಿ ₹60 ಮತ್ತು ₹40ಕ್ಕೆ ಮಾರಾಟವಾಗುತ್ತಿದೆ. ಬದನೆಕಾಯಿ ಬೆಲೆಯೂ ಈ ವಾರ ಕಡಿಮೆಯಾಗಿದೆ. ಕಳೆದ ವಾರ ₹50 ಇದ್ದ ಬದನೆ ಈ ವಾರ ಕೆ.ಜಿಗೆ ₹40ರಂತೆ ಮಾರಾಟವಾಗುತ್ತಿದೆ.

ನುಗ್ಗೆಕಾಯಿ, ಮೆಣಸಿನಕಾಯಿ ಮತ್ತು ಡಬ್ಬು ಮೆಣಸಿನಕಾಯಿ ದರ ಸ್ಥಿರವಾಗಿದೆ. ಈ ವಾರ ಬೀನ್ಸ್‌ ಬೆಲೆ ದುಪಟ್ಟಾಗಿದೆ. ಕಳೆದ ವಾರ ₹40ಕ್ಕೆ ಕೆ.ಜಿ ಮಾರಾಟವಾಗಿದ್ದ ಬೀನ್ಸ್‌ ಬೆಲೆ ಈ ವಾರ ₹80ಕ್ಕೆ ಜಿಗಿತ ಕಂಡಿದೆ. ಗಜ್ಜರಿ, ಸೌತೆಕಾಯಿ ಬೆಲೆಯೂ ₹20ಕ್ಕೆ ಹೆಚ್ಚಳವಾಗಿದೆ.

ಸೊಪ್ಪಿನ ಆವಕ ಕಡಿಮೆ: ಬಿಟ್ಟು ಬಿಡದೆ ಮಳೆಯಾಗುತ್ತಿರುವುದರಿಂದ ಕೃಷಿ ಚುಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಸೊಪ್ಪು ಆವಕ ಕಡಿಮೆಯಾಗಿದೆ.

ಮೊಟ್ಟೆ ದರ ಸ್ಥಿರ: ಕಳೆದ ವಾರ ಡಜನ್‌ಗೆ ₹70ರಂತೆ ಮಾರಾಟವಾಗಿದ್ದ ಮೊಟ್ಟೆಯ ದರದಲ್ಲಿ ಏರುಪೇರಾಗಿಲ್ಲ. ಒಂದೊಂದು ಮೊಟ್ಟೆಯು ಬಿಡಿಯಾಗಿ ₹6ಕ್ಕೆ ಒಂದರಂತೆ ಮಾರಲಾಗುತ್ತಿದೆ.

ಹಣ್ಣುಗಳ ದರ ಇಳಿಕೆ: ‘ಕಳೆದ ವಾರಕ್ಕಿಂತ ಈ ವಾರ ಹಣ್ಣುಗಳ ಬೆಲೆಯಲ್ಲಿ ₹10 ರಿಂದ ₹20 ಇಳಿಕೆಯಾಗಿದೆ. ಗ್ರಾಹಕರು ಖರೀದಿ ನಡೆಸದ ಕಾರಣ ಶೇ 90 ವ್ಯಾಪಾರ ಕುಸಿತ ಕಂಡಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಸುನೀಲ ಚಾವಾಳಕರ.

ತರಕಾರಿ ದರ (ಕೆ.ಜಿ. ₹ಗಳಲ್ಲಿ)

ತರಕಾರಿ;ಕಳೆದ ವಾರ;ಈ ವಾರ

ಹೀರೆಕಾಯಿ;80;40

ಆಲೂಗಡ್ಡೆ;40;20

ಈರುಳ್ಳಿ;40;30

ಟೊಮೆಟೊ;30;20

ಹಾಗಲಕಾಯಿ;80;60

ಬೆಂಡೆಕಾಯಿ;60;40

ಬದನೆಕಾಯಿ;50;40

ನುಗ್ಗೆಕಾಯಿ;80;80

ಮೆಣಸಿನಕಾಯಿ;60;60

ಡಬ್ಬು ಮೆಣಸಿನಕಾಯಿ;60;60

ಬೀನ್ಸ್;40;80

ಸೌತೆಕಾಯಿ;40;60

ಗಜ್ಜರಿ;40;60

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು