ಬುಧವಾರ, ನವೆಂಬರ್ 25, 2020
24 °C
ಕೆರೂರು ಬೀರಲಿಂಗೇಶ್ವರರ ಜಾತ್ರೆಯಲ್ಲಿ ಅವಧೂತರ ನುಡಿ

ಮನುಷ್ಯರಿಗೆ ಬಾರಾಣಿ ಬ್ಯಾನಿ, ಸಂಭಾಳಿಸಿ ನಡ್ರೀ: ಅವಧೂತರ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ‘ಚಾರಣಿ ಬ್ಯಾನಿ ಜಾನುವಾರಿಗೆ ಬಂದರ, ಬಾರಾಣಿ ಬ್ಯಾನಿ ಮನುಷ್ಯರಿಗೆ ಬಂದೈತಿ, ಸಂಭಾಳಿಸಿರ್ ನಡ್ರೀ’ ಎಂಬ ಅವಧೂತನ ಹೇಳಿಕೆ ನುಡಿಗೆ ಜನರು ದಂಗಾದ ಪ್ರಸಂಗವು ಆಳಂದ ತಾಲ್ಲೂಕಿನ ಕೆರೂರು ಗ್ರಾಮದಲ್ಲಿ ಶನಿವಾರ ನಡೆಯಿತು.

ದೀಪಾವಳಿಯ ನರಕ ಚತುರ್ದಶಿ ದಿನದಂದು ಇಲ್ಲಿಯ ಕೆರೂರು ಬೀರಲಿಂಗೇಶ್ವರ ಜಾತ್ರೆಯು ಜರುಗುವುದು ವಾಡಿಕೆ. ದೇವರು ಮೈಮೇಲೆ ಬಂದಿದೆ ಎಂದು ಇಲ್ಲಿಯ ದೇವಸ್ಥಾನದ ಪೂಜಾರಿಗಳು ಒಡುಪು ಮಾತಿನಲ್ಲಿ ಹೇಳುವ ಹೇಳಿಕೆಯು ವಿಶಿಷ್ಟವಾದದು. ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಪಲ್ಲಕ್ಕಿ ಮುಂದೆ ಡೊಳ್ಳಿನ ಸದ್ದಿಗೆ ಪೂಜಾರಿಗಳ ಕುಣಿತವು ರೋಮಾಂಚನ ಉಂಟು ಮಾಡುವುದು.

‘ಮನುಷ್ಯನ ಪೀಡಾ ಯಾವದು ಬಿಚ್ಚ ಹೇಳಲಾ’ ಎಂದು ಪೂಜಾರಿ ಸವಾಲಿಗೆ ಮೊತ್ತಬ್ಬ ಅವಧೂತನು, ‘ಹೊರಗಿನ ಪೀಡಾ ಹೊರಗ ಹೋಯಿತಲಾ ತಾಳು’ ಎಂದಾಗ ಹಲವರು ಕೊರೊನಾ ಜತೆಗೆ ಹೊಲಿಕೆ ಮಾಡಿ ಸಮಾಧಾನ ಪಟ್ಟರು.

‘ಕೆಂಪು ಮುತ್ತ ಕಿಮ್ಮತ್ತ ಬದತ್ತದ’ ನುಡಿಗೆ ಮುಂದೆ ತೊಗರಿ ಬೆಳೆಗೆ ಬೆಲೆ ಹೆಚ್ಚುವದು ಎಂಬ ಅರ್ಥ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬೀರಣ್ಣಾ ಪೂಜಾರಿ, ರಾಹುಲ ಪಾಟೀಲ, ಕಲ್ಯಾಣಿ ಬ್ಯಾಗಳ್ಳಿ, ಶ್ರೀಶೈಲ ಕೆರೂರು, ಬಾಬುರಾವ ಸುಳ್ಳದ, ಗುಂಡಪ್ಪ ಉದ್ದನಶೆಟ್ಟಿ, ಅಪ್ಪಾಸಾಹೇಬ ಅಂಜುಟಗಿ ಇದ್ದರು. ಸುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು