ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಚಿಂತನೆಗಳಿಂದ ಪರಿವರ್ತನೆ: ಚಿತ್ರನಟ ಚೇತನ್

Last Updated 25 ಜನವರಿ 2022, 15:42 IST
ಅಕ್ಷರ ಗಾತ್ರ

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಯುವಕರು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದು ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಅಭಿಮತಪಟ್ಟರು.

ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಭೀಮಾ ಕೋರೇಗಾಂವ ವಿಜಯೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಆಳಂದ ತಾಲ್ಲೂಕಿನ ಭೀಮ ಆರ್ಮಿ ಸಂಘಟನೆಯು ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಮಾನತೆ, ಸಾಮಾಜಿಕ ನ್ಯಾಯದ ತಳಹದಿಯಲ್ಲಿ ರೂಪಗೊಂಡಿರುವ ಹೊಸ ಭಾರತವನ್ನು ಧಾರ್ಮಿಕ ರಾಷ್ಟ್ರವಾಗಿಸುವ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಡಬೇಕಿದೆ ಎಂದರು.

ಧೈರ್ಯ, ಸ್ವಾಭಿಮಾನವು ನಾವೂ ತಿನ್ನುವ ಅನ್ನದಿಂದ ಅಳೆಯಲಾಗದು. ಅನ್ಯಾಯ, ಅಸತ್ಯದ ವಿರುದ್ಧ ಹೋರಾಡುವದು ನಿಜವಾದ ಧೈರ್ಯವಂತಿಕೆಯಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ ನಮ್ಮ ಸಮಾಜವು ಹಲವು ಸಮಸ್ಯೆಗಳು ಎದುರಿಸುತ್ತಿದೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಯುವ ಸಮೂಹ ಸಿದ್ದಗೊಳ್ಳಲು ಕರೆ ನೀಡಿದರು.

ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ಸಮಾಜದಲ್ಲಿನ ಶೋಷಣೆ, ಅಸಮಾನತೆ ವಿರುದ್ಧ ನಡೆದ ವೈಚಾರಿಕ ಹೋರಾಟಗಳು ಸದಾ ಪ್ರಸ್ತುತವಾಗಿವೆ. ಸಮಾಜ ಸುಧಾರಕರ ವಿಚಾರಗಳು ನಡೆ ನುಡಿಯಲ್ಲಿ ಅನುಸರಣೆಯಾಗಬೇಕು ಎಂದರು.

ಧುತ್ತರಗಾಂವ-ಉಸ್ತುರಿಯ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.

ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮತೀನಕುಮಾರ, ಪ್ರಮುಖರಾದ ಯಶಪಾಲ ಗೋರೆ, ಸೂರ್ಯಕಾಂತ ಜಿಡಗೆ, ಗೌತಮ ಕಾಂಬಳೆ, ಭೀಮಾಶಂಕರ ಪಾಟೀಲ ಮಾತನಾಡಿದರು

ಪ್ರಮುಖರಾದ ದಯಾನಂದ ಸೇರಿಕಾರ, ನಾಗಮೂರ್ತಿ ಶೀಳವಂತ, ಆನಂದರಾವ ಗಾಯಕವಾಡ, ಬಾಬುರಾವ ಅರಣೋದಯ, ಮಹ್ಮದ ಹನೀಪ್, ಸೋಮಶೇಖರ ಕಾಂಬಳೆ ಇದ್ದರು. ಬಾಬುರಾವ ಬೀಳಗಿ ಸ್ವಾಗತಿಸಿದರು. ರಾಜಶೇಖರ ಕಡಗನ್ ನಿರೂಪಿಸಿದರು. ಮಿಥುನ ಕೊಚ್ಚಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT