ಭಾನುವಾರ, ಜೂನ್ 26, 2022
22 °C

ಭೋಗನಳ್ಳಿ: ಶಾಲಾ ಪ್ರಾರಂಭೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಅಫಜಲ‍ಪುರ ತಾಲ್ಲೂಕಿನ ಭೋಗನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿತ್ತು.

ಎಸ್‌ಸಿಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್ ಉಪಾಧ್ಯಕ್ಷ ಹಾಜಿ ಮಲಂಗ್, ಸಾವಯವ ಕೃಷಿಕ ಲತೀಫ್ ಪಟೇಲ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಸಂಗಮನಾಥ ಸಾಳಾಪೂರ, ಶಿಕ್ಷಕ ಸಿಬ್ಬಂದಿ ಹಾಗೂ ಬಿಸಿ ಊಟದ ಸಿಬ್ಬಂದಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಸಂಗಮನಾಥ, 2022–23ನೇ ವರ್ಷವನ್ನು ಕಲಿಕಾ ಚೇತರಿಕೆ ವರ್ಷವಂದು ಆಚರಿಸಲಾಗುತ್ತಿದೆ. ಕೋವಿಡ್–19ನಿಂದ ಹಿಂದಿನ ದಿನಗಳಲ್ಲಿ18 ತಿಂಗಳ ಮಕ್ಕಳ ಕಲಿಕೆಯಲ್ಲಿ ಕುಂಠಿತವಾಗಿದೆ. ಆ ಕೊರತೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಬಹಳ ಅವಶ್ಯಕ. ಆದ್ದರಿಂದ ಶಾಲೆಗೆ ದಾಖಲಾದ ಮಗು ನಿರಂತರ ಶಾಲೆಗೆ ಹಾಜರಾಗಬೇಕು. ಜೊತೆಗೆ ಕಲಿಕೆಯಲ್ಲಿ ತೊಡಗಬೇಕು ಎಂದರು.

ಬಾಹುಬಲ ಮಾಲಗತ್ತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು