ಭಾನುವಾರ, ಜನವರಿ 19, 2020
27 °C

ಬೈಕ್‌ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕನಕಪುರ ಸಮೀಪ ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಚಿಮ್ಮನಚೋಡದಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬಂಡಪ್ಪ ಯಂಗೆನೋರ್‌ ಅವರ ಬೈಕ್‌ ಮತ್ತು ಚಿಂಚೋಳಿಯಿಂದ ಚಿಮ್ಮನಚೋಡ ಕಡೆಗೆ ಹೊರಟಿದ್ದ ವಿಕಾಸ ನರಸಿಂಗ್‌ ಅವರ ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಡಪ್ಪ ಯಂಗನೋರ್‌ ಅವರು ಚಿಮ್ಮನಚೋಡ ನಿವಾಸಿಯಾಗಿದ್ದು, ವಿಕಾಸ ನರಸಿಂಗ್‌ ಅವರು ಸಾಸರಗಾಂವ್‌ ತಾಂಡಾದ ನಿವಾಸಿ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೊ ಪಲ್ಟಿ: 7 ಮಂದಿಗೆ ಗಾಯ

ಹತ್ತಿ ಬಿಡಿಸಲು ನೆರೆಯ ತೆಲಂಗಾಣದ ಸಂಗಾರೆಡ್ಡಿ ಮತ್ತು ಝರಾ ಸಂಗಮ್‌ಕ್ಕೆ ತೆರಳುತ್ತಿದ್ದ ಕೃಷಿ ಕಾರ್ಮಿಕರ ಆಟೊ ಗೌಸಾಬಾದ ಬಳಿ ಪಲ್ಟಿಯಾಗಿ ತಾಲ್ಲೂಕಿನ ಕುಸ್ರಂಪಳ್ಳಿ ಗ್ರಾಮದ 7 ಮಂದಿ ಗಾಯಗೊಂಡ ಘಟನೆ ಭಾನುವಾಸ ಬೆಳಗಿನ ಜಾವ 4.30ಕ್ಕೆ ಸಂಭವಿಸಿದೆ.

ಗಾಯಾಳುಗಳಿಗೆ ಇಲ್ಲಿನ ಚಂದಾಪುರದಲ್ಲಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದೆ. ಇವರನ್ನು ಅಬ್ದುಲ್‌ ಇಮಾಮಸಾಬ್‌, ಮುಮ್ತಾಜಬಿ, ಲಲಿತಾ, ಸಂಗೀತಾ, ದ್ರೌಪದಿ, ಸಂಗೀತಾ ಎಂದು ಗುರುತಿಸಲಾಗಿದೆ.

ಪ್ರತಿಕ್ರಿಯಿಸಿ (+)