ಜೇವರ್ಗಿ: ‘ತಾಲ್ಲೂಕಿನ ಬಿರಾಳ ಗ್ರಾಮದ ಆರಾಧ್ಯದೈವ ಕೋರಿಸಿದ್ದೇಶ್ವರರ ಜಾತ್ರೆಯು ಭಕ್ತಿ, ಜ್ಞಾನ, ಸಂಸ್ಕೃತಿಯ ಸಂಗಮವಾಗಿದೆ’ ಎಂದು ನಾಲವಾರ ಮಠದ ಸಿದ್ಧತೋಟೇಂದ್ರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಬಿರಾಳ.ಕೆ ಗ್ರಾಮದ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪವಾಡ ಪುರುಷ ಮಹಾತ್ಮ ಕೋರಿಸಿದ್ದೇಶ್ವರರು ಈ ನಾಡಿನ ಪುಣ್ಯದ ನಿಧಿಯಂತೆ. ಭಕ್ತರ ಕಷ್ಟಗಳನ್ನು ನಿವಾರಿಸಿ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿದ್ದಾರೆ’ ಎಂದರು.

ಇದಕ್ಕೂ ಮುನ್ನ ನಾಲವಾರ ಶ್ರೀಗಳ ಭವ್ಯ ಮೆರವಣಿಗೆ ಸಾರೋಟಿನಲ್ಲಿ ಅದ್ದೂರಿಯಾಗಿ ಜರುಗಿತು. ಮಹಿಳೆಯರ ಕುಂಭ ಕಳಸದೊಂದಿಗೆ ಡೊಳ್ಳು, ಹಲಗೆ, ಬಾಜಾ, ಭಜಂತ್ರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಕೋರಿಸಿದ್ದೇಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ನಾಲವಾರ ಶ್ರೀಗಳು ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನೀಲಕಂಠಾಯಗೌಡ ಇಟಗಿ, ವಿರೂಪಾಕ್ಷ ರೆಡ್ಡಿ, ಬಸವಂತ ಇಮಡಿ, ಗುರುಬಸಪ್ಪ ಪೊಲೀಸ್ ಪಾಟೀಲ್, ಸಂತೋಷ ಮಾಲಿಪಾಟೀಲ್, ರಾಜಶೇಖರ ವಾರದ ಬಿರಾಳ, ಚಂದಣ್ಣ ಇನಾಂದಾರ್, ಲೋಕೇಶ್ ಬಿರಾಳ, ಯಶವಂತರಾಯಗೌಡ, ಮಹೇಶ ವೀರಯ್ಯಸ್ವಾಮಿ ಚಿಂಚೋಳಿ, ಸಾಯಬಣ್ಣ ತಳವಾರ, ಮಹಮ್ಮದ್ ಅಲಿ, ಶಿವರೆಡ್ಡಿ ಗೌಡ ಕುಲಕುಂದಿ, ಮಹಾದೇವ ಗಂವ್ಹಾರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.