ಗುರುವಾರ , ಮೇ 26, 2022
24 °C

ಕಲಬುರಗಿ: 149 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನಪರಿಷತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು 149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿ.ಜಿ. ಪಾಟೀಲ ಅವರು 3,452 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಅವರು 3,303 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ 16 ಮತಗಳನ್ನು ಪಡೆದು ಠೇವಣಿ ‌ಕಳೆದುಕೊಂಡರು.

298 ಮತಗಳು ತಿರಸ್ಕೃತಗೊಂಡವು. ಚಲಾವಣೆಯಾದ 7069ಮತಗಳಲ್ಲಿ 6771 ಮತಗಳು ಮಾತ್ರ ಸಿಂಧುವಾಗಿದ್ದವು.

ಇದನ್ನೂ ಓದಿ: 

ಈ ಕ್ಷೇತ್ರದಿಂದ ಮರು ಆಯ್ಕೆಯಾದ ಮೊದಲ ವ್ಯಕ್ತಿ ಬಿ.ಜಿ. ಪಾಟೀಲ ಅವರಾಗಿದ್ದಾರೆ. 

ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಿವಾನಂದ ಪಾಟೀಲ ಮರತೂರ ಉತ್ತಮ‌ ಪೈಪೋಟಿ ನೀಡಿದರು.

ಶಾಸಕರ ಗೈರು: ಬಿ.ಜಿ. ಪಾಟೀಲ ಅವರು ಗೆಲುವು ಸಂಭ್ರಮಿಸುವ ಸಂದರ್ಭದಲ್ಲಿ ಜಿಲ್ಲೆಯ ಸಂಸದ, ಶಾಸಕರು, ಪ್ರಮುಖ ಬಿಜೆಪಿ ನಾಯಕರು ಗೈರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು