ಬುಧವಾರ, ಜನವರಿ 19, 2022
18 °C

ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಸಮೀಪದ ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ಸದಸ್ಯ ಶರಣು ಹರಳಯ್ಯ ಸೇರಿದಂತೆ ಅನೇಕ ಕಾರ್ಯಕರ್ತರು ಕಾಂಗ್ರೆಸ್‌, ಜೆಡಿಎಸ್‌ ತೊರೆದು ಮಂಗಳವಾರ ಬಿಜೆಪಿ ಸೇರ್ಪಡೆಯಾದರು.

ಕಲ್ಲಹಂಗರಗಾದ ದೇಸಾಯಿ ಸಾಹುಕಾರ, ಶ್ರೀಮಂತ ದಳಪತಿ ನೇತೃತ್ವದಲ್ಲಿ ಶಾಸಕ ಬಸವರಾಜ ಮತ್ತಿಮಡು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು ‘ಪ್ರಧಾನಿ ಮೋದಿಯವರ ನಿರಂತರ ಕಾರ್ಯಗಳಿಂದ ಬಿಜೆಪಿ ಜನ ಮನ್ನಣೆ ಪಡೆಯುತ್ತಿದ್ದು ದೇಶದ ಬಹುತೇಕ ಜನ ಬಿಜೆಪಿಯ ಕಾರ್ಯಕರ್ತರಾಗುತ್ತಿದ್ದಾರೆ. ಹೀಗಾಗಿ ವಿಶ್ವದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ತಿಳಿಸಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಮಾಲಿ ಪಾಟೀಲ, ಮಲ್ಲಿಕಾರ್ಜುನ ಹೀರಾಪುರಶಿ, ಶಂಭು ತುಕ್ಕೋಜಿ, ದೇಸಾಯಿ ನೀಲೂರ, ಮಲ್ಲಣ್ಣ ನೀಲೂರ, ಮಂಜು ಪೂಜಾರಿ, ಗ್ರಾ.ಪಂ ಸದಸ್ಯ ಪ್ರಕಾಶ ಪಾಟೀಲ, ಸೂರ್ಯಕಾಂತ ರೇವಣಿ ಮತ್ತಿತರರು ಇದ್ದರು.

ಹೊಳಕುಂದಾ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ನಡೆಸಿ ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಜಿ. ಪರ ಮತಯಾಚಿಸಿದರು.

ಮಲ್ಲಿಕಾರ್ಜುನ ಮರತೂರಕರ್‌, ಚೆನ್ನು ಮುನ್ನಳ್ಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೇತನ ಹೊಳಕುಂದಾ, ಹಣಮಂತ ಗುಡ್ಡಾ, ಪ್ರವೀಣ ಮುಚ್ಛಟ್ಟಿ, ಹರ್ಷವರ್ಧನ ಗುಗಳೆ, ರಾಜಕುಮಾರ ಗಬರಾದಿ, ಗಿರೀಶ ಪಾಟೀಲ, ಪರಶುರಾಮ ದರ್ಗನ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು