ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದತ್ತ ಬಿಜೆಪಿ ನಿರ್ಲಕ್ಷ್ಯ: ಪ್ರಿಯಾಂಕ್ ಖರ್ಗೆ

Last Updated 2 ಡಿಸೆಂಬರ್ 2021, 6:11 IST
ಅಕ್ಷರ ಗಾತ್ರ

ಚಿಂಚೋಳಿ: ‘ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಎಂದರೆ ಬಿಜೆಪಿಗೆ ನಿರಾಸಕ್ತಿ. ಈ ಭಾಗದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಪಟ್ಟಣದ ವೀರೇದ್ರ ಪಾಟೀಲ ಸ್ಮಾರಕದ ಬಳಿ ಬುಧವಾರ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಸರ್ಕಾರ ಈ ಭಾಗಕ್ಕೆ ಒಂದು ಸಚಿವ ಸ್ಥಾನ ನೀಡಲಿಲ್ಲ. ಇರುವ ಒಬ್ಬ ಸಚಿವ ಪ್ರಭು ಚವಾಣ್ ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಬರುವುದಿಲ್ಲ’ ಎಂದರು.

‘ದೇಶದ ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ನಂಬರ್‌ 1 ಸ್ಥಾನದಲ್ಲಿದೆ. ಬದಲಾವಣೆ ಬೇಕಿದ್ದರೆ ಶಿವಾನಂದ ಪಾಟೀಲ ಅವರನ್ನು ಗೆಲ್ಲಿಸಿ’ ಎಂದು ಅವರು ಮನವಿ ಮಾಡಿದರು.

‘ಅಬಕಾರಿ ಅಧಿಕಾರಿಯ ವರ್ಗಾವಣೆಗೆ ಸಚಿವರು ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿರುವ ಬಗ್ಗೆ ಅಧಿಕಾರಿಯ ಪುತ್ರಿ , ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಶೇ 40ರಷ್ಟು ಹಣ ಪಡೆಯಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ’ ಎಂದರು.

ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಗೆ ತಿಲಾಂಜಲಿ ಹಾಡಲಿ ದ್ದಾರೆ. ಈ ಬಗ್ಗೆ ಜಾಗೃತರಾಗಬೇಕು’ ಎಂದರು.

ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮಾತನಾಡಿದರು. ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಬಸಯ್ಯ ಗುತ್ತೇದಾರ, ದೀಪಕನಾಗ್ ಪುಣ್ಯಶೆಟ್ಟಿ, ರವಿರಾಜ ಕೊರವಿ, ಭೀಮರಾವ್ ಟಿಟಿ, ಗೋಪಾಲರಾವ್ ಕಟ್ಟಿಮನಿ, ರೇವಣಸಿದ್ದಪ್ಪ ಸಾತನೂರ, ಬಸವರಾಜ ಪಾಟೀಲ ಹೇರೂರು, ದೇವೇಂದ್ರಪ್ಪ ಪಾಟೀಲ ಹೆಬ್ಬಾಳ, ಅನಿಲಕುಮಾರ ಜಮಾದಾರ, ಅಬ್ದುಲ್ ಬಾಷೀತ್, ಬಿ.ವಿ ಸಜ್ಜನ್, ಅಮರೇಶ ಗೋಣಿ, ಚಿತ್ರಶೇಖರ ಪಾಟೀಲ, ಉಲ್ಲಾಸ ಕೆರೋಳ್ಳಿ, ದೇವೇಂದ್ರಪ್ಪ ಮರತೂರ, ನರಶಿಮ್ಲು ಕುಂಬಾರ, ಚಿತ್ರಶೇಖರ ಪಾಟೀಲ, ಮಧುಸೂಧನರೆಡ್ಡಿ ಪಾಟೀಲ, ವೀರಮ್ಮಾ ಸಂಗಯ್ಯಸ್ವಾಮಿ, ಲಕ್ಷ್ಮಿ ಮಂಜುನಾಥ ಕೊರವಿ, ಅಂಕಿತಾ ಕಮಲಾಕರ, ಪುಷ್ಪಾ ಜೀತೇಂದ್ರ, ಸಂದಿಪ ಚವ್ಹಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT