ಕಲಬುರಗಿ: ‘ರಾಜ್ಯ ಸರ್ಕಾರ ಕಳೆದ 3 ವರ್ಷಗಳಲ್ಲಿ ಎಸ್ಸಿಎಸ್ಪಿ, ಟಿಎಸ್ಪಿಗೆ ಮೀಸಲಿಟ್ಟಿದ್ದ ₹39,859 ಕೋಟಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಈ ಹಣವನ್ನು ಮರಳಿ ಪರಿಶಿಷ್ಟರ ಕಲ್ಯಾಣಕ್ಕೇ ಬಳಸುವುದಾಗಿ ಘೋಷಿಸಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ರಾಜಕುಮಾರ ಪಾಟೀಲ ತೇಲ್ಕೂರ್ ಎಚ್ಚರಿಸಿದರು.

‘2023–24ರಲ್ಲಿ ₹11,144 ಕೋಟಿ, 2024–25ರಲ್ಲಿ ₹14,282 ಕೋಟಿ ಹಾಗೂ 2025–26ರಲ್ಲಿ ಈತನಕ ₹13,433 ಕೋಟಿ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿದೆ. ಗ್ಯಾರಂಟಿ ಹೆಸರಿನಲ್ಲಿ ಪರಿಶಿಷ್ಟರ ಕಲ್ಯಾಣದ ನಿಧಿ ಬಳಸಿದೆ. ಆದರೆ, ಯಾವುದೇ ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ಕನಿಷ್ಠ ಧ್ವನಿಯನ್ನೂ ಯಾಕೆ ಎತ್ತುತ್ತಿಲ್ಲ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಸಚಿವ ಪ್ರಿಯಾಂಕ್ ಖರ್ಗೆ ಮಾತೆತ್ತಿದರೆ ಸಂವಿಧಾನ, ಡಾ.ಅಂಬೇಡ್ಕರ್, ದೇಶ–ಜಗತ್ತಿನ ಬಗೆಗೆ ಮಾತನಾಡುತ್ತಾರೆ. ಆದರೆ, ಪರಿಶಿಷ್ಟರ ಕಲ್ಯಾಣ ನಿಧಿ ಅನ್ಯ ಉದ್ದೇಶಕ್ಕೆ ಬಳಸಿ ದ್ರೋಹ ಬಗೆಯುತ್ತಿದ್ದರೂ ಯಾಕೆ ಚಕಾರ ಎತ್ತುತ್ತಿಲ್ಲ’ ಎಂದು ಕೇಳಿದರು.

‘7ಡಿ’ ಕಲಂ ಕಿತ್ತು ಹಾಕಿ ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ ಬಲಪಡಿಸಿದ್ದೆ ನಾವು ಎಂದು ಬೆನ್ನು ತಟ್ಟಿಕೊಳ್ಳುವ ಸಿದ್ದರಾಮಯ್ಯ ಒಳಗೊಳಗೆ ‘7ಸಿ’ ಮೂಲಕ ಪರಿಶಿಷ್ಟರ ಮೀಸಲು ನಿಧಿಗೆ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಕೂಡಲೇ ‘7ಸಿ’ ಕಲಂ ಅನ್ನು ಸರ್ಕಾರ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಎಸ್ಸಿಎಸ್ಪಿ, ಟಿಎಸ್ಪಿಗೆ 2025–26ನೇ ಬಜೆಟ್ನಲ್ಲಿ ₹42,018 ಕೋಟಿ ನಿಗದಿಯಾಗಿತ್ತು. ಆದರೆ, ಈತನಕ ₹10,345 (ಶೇ 30ರಷ್ಟು) ಮಾತ್ರವೇ ಖರ್ಚಾಗಿದೆ. ಇನ್ನುಳಿದ ಹಣವನ್ನು ಯಾವಾಗ ವೆಚ್ಚ ಮಾಡಲಾಗುತ್ತದೆ ಎಂಬುದನ್ನು ಸರ್ಕಾರ ಜನರಿಗೆ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನ ರಕ್ಷಣೆ ಅಭಿಯಾನಕ್ಕೂ ಎಸ್ಸಿಎಸ್ಪಿ/ ಟಿಎಸ್ಪಿ ಅನುದಾನ ಬಳಸುತ್ತಿರುವುದು ಖಂಡನೀಯ. ಬಾಬಾಸಾಹೇಬರ ಸಂವಿಧಾನ ಎಲ್ಲ ಭಾರತೀಯರಿಗೆ ಸೇರಿದ್ದು. ಹೀಗಾಗಿ ಈ ಅಭಿಯಾನಕ್ಕೆ ಖಜಾನೆಯಿಂದ ವೆಚ್ಚ ಮಾಡಬೇಕು. ಎಲ್ಲ ಪರಿಶಿಷ್ಟ ನಿಗಮಗಳಿಗೆ ತಲಾ ₹1 ಸಾವಿರ ಕೋಟಿ ಅನುದಾನ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶರಣಪ್ಪ ತಳವಾರ, ಶಿವರಾಜ ಪಾಟೀಲ ರದ್ದೇವಾಡಗಿ, ಅವ್ವಣ್ಣ ಮ್ಯಾಕೇರಿ, ವೆಂಕಟಪ್ರಸಾದ್, ಉಮೇಶ ಪಾಟೀಲ, ಶಿವಯೋಗಿ ನಾಗನಹಳ್ಳಿ, ಶೇಕರೆಡ್ಡಿ, ಮಹೇಂದ್ರ ಪೂಜಾರಿ, ಮಲ್ಲಿಕಾರ್ಜುನ ಜಿನಕೇರಿ, ಆನಂದ ಕೊರಳ್ಳಿ, ಬಾಬುರಾವ ಹಾಗರಗುಂಡಗಿ, ನಾಗರಾಜ್ ಮಹಾಗಾಂವಕರ ಇದ್ದರು.

ಆನ್ಲೈನ್ನಲ್ಲಿ ದಿಶಾ ಸಭೆ: ಜಾಧವ ವ್ಯಂಗ್ಯ

‘ಒಂದೂವರೆ ವರ್ಷದ ಬಳಿಕ ನಡೆದ ದಿಶಾ ಸಭೆ ಅವೈಜ್ಞಾನಿಕವಾಗಿತ್ತು. ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆನ್ಲೈನ್ ಮೂಲಕ ಸಭೆ ನಡೆಸಿದ್ದು ದೇಶದಲ್ಲೇ ಮೊದಲು. ಅದಕ್ಕೂ ತಾಂತ್ರಿಕ ತೊಂದರೆ ಕಾಡಿದೆ’ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ ವ್ಯಂಗ್ಯವಾಡಿದರು. ‘ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟು ಬೇರೆ ವಿಷಯಗಳ ಪ್ರಗತಿ ಬಗ್ಗೆ ಚರ್ಚೆ ಮಾಡಿಲ್ಲ. ದಿಶಾ ಸಭೆಗೆ ಕನಿಷ್ಠ 60 ಇಲಾಖೆಗಳ ಅಧಿಕಾರಿಗಳನ್ನು ಕರೆಯಬೇಕಿತ್ತು. ಬರೀ 37 ಇಲಾಖೆ ಅಧಿಕಾರಿಗಳನ್ನು ಸಭೆಗೆ ಕರೆದಿದ್ದಾರೆ. 15 ದಿನಗಳ ಮುನ್ನವೇ ಸಭೆಯ ಕಾರ್ಯಸೂಚಿ ಕೊಡಬೇಕಿತ್ತು ಅದೂ ಆಗಿಲ್ಲ’ ಎಂದು ಟೀಕಿಸಿದರು. ‘ನಾನು ಸಂಸದನಾಗಿದ್ದಾಗ ಹತ್ತಾರು ಪತ್ರ ಬರೆದು ದಿಶಾ ಸಭೆಯ ಅಧ್ಯಕ್ಷತೆ ತಮಗೇ ಕೊಡುವಂತೆ ಮಲ್ಲಿಕಾರ್ಜುನ ಖರ್ಗೆ ಕೋರಿದ್ದರು. ಆದರೆ ಬಳಿಕ ಒಂದೂ ಸಭೆ ನಡೆಸಿಲ್ಲ. ಇದೀಗ ಅವರ ಅಳಿಯ ಸಂಸದರಾಗಿದ್ದಾರೆ. ಈಗೇಕೆ ದಿಶಾ ಸಭೆ ನಡೆಸುವ ಉತ್ಸಾಹ ತೋರುತ್ತಿಲ್ಲ’ ಎಂದು ಪ್ರಶ್ನಿಸಿದರು. ‘ಕಾಟಾಚಾರದ ಸಭೆಗಳಿಂದ ಅಧಿಕಾರಿಗಳಿಗೇ ಸುಗ್ಗಿ. ಸಭೆಯಲ್ಲಿ ಕಳೆದ ಸಭೆಯ ನಿರ್ಧಾರಗಳ ಅನುಷ್ಠಾನದ ಚರ್ಚೆಯೂ ಆಗಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಬ್ಯಾಂಕರ್ಸ್ ಮೀಟಿಂಗ್ ಕೂಡ ನಡೆದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.