ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸ್ವಯಂ ಪ್ರೇರಿತ ರಕ್ತದಾನ ಮಾಡಿ

Last Updated 3 ಅಕ್ಟೋಬರ್ 2021, 6:30 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿನ್ವೆನ್ಷನ್‌ ಸೊಸೈಟಿ, ಪೊಲೀಸ್‌ ಇಲಾಖೆ, ರೆಡ್‌ಕ್ರಾಸ್‌ ಸಂಸ್ಥೆ, ಪೊಲೀಸ್‌ ತರಬೇತಿ ಕೇಂದ್ರ ನಾಗನಳ್ಳಿ, ಆರ್.ಆರ್.ಸಿ. ಘಟಕದ ರಕ್ತನಿಧಿ ಕೇಂದ್ರಗಳು ಮತ್ತು ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಅಶ್ರಯದಲ್ಲಿ ಶನಿವಾರ ನಾಗನಳ್ಳಿ ಪೊಲೀಸ್‌ ತಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಮುಖ್ಯ ಅಥಿತಿಯಾಗಿ ಆಗಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ ಶಶಿ ಮಾತನಾಡಿ, ‘ರಕ್ತವನ್ನು ಕೃತವಾಗಿ ತಯಾರಿಸಲು ಆಗುವುದಿಲ್ಲ. ನಾವು ದಾನ ಮಾಡಿದರೆ ಮಾತ್ರ ಅವಶ್ಯಕತೆ ಇರುವವರಿಗೆ ಸಿಗುತ್ತದೆ. ಹೀಗಾಗಿ, ತಾವುಗಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಲು ಎಲ್ಲ ತರಬೇತಿದಾರರು ಮುಂದಾಗಬೇಕು’ ಎಂದು ಅವರು ತಿಳಿಸಿದರು.

ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕದ ಮೇಲ್ವಿಚಾರಕ ಸೋಮಶೇಖರ್ ಮಾಲಿಪಾಟೀಲ, ಡಾ.ಮಮತಾ ವಿ. ಪಾಟೀಲ ಅವರು, ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತ ದಿನಾಚರಣೆ ಕುರಿತು ಅಥಿತಿ ಉಪನ್ಯಾಸಕ ನೀಡಿದರು. ರಕ್ತದಾನ ಮಾಡಿದ ದಾನಿಗಳಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಯವರನ್ನು ಸನ್ಮಾನಿಸಲಾಯಿತು.

ರೇವಣಸಿದ್ಧಪ್ಪ ಬಡಾ, ಶಿವಕುಮಾರ ದೋಶೆಟ್ಟಿ, ಡಾ.ರಾಧಿಕಾ ರಾವ್, ಸುಗಲಾರಾಣಿ, ಉತ್ತರಾದೇವಿ, ಸುಜ್ಞಾನಿ, ಮಲ್ಲಿಕಾರ್ಜುನ ಪರಿಟ್‌ ಹಾಗೂ ಸಿಬ್ಬಂದಿ ಇದ್ದರು.

ಕಾರ್ಯಕ್ರಮದಲ್ಲಿ 110 ಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT