ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸ್ವಾತಂತ್ರೋತ್ಸವ: 85 ಜನರಿಂದ ರಕ್ತದಾನ

Published 16 ಆಗಸ್ಟ್ 2024, 4:15 IST
Last Updated 16 ಆಗಸ್ಟ್ 2024, 4:15 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ ದಿನಾಚರಣೆ ಹಾಗೂ ಸಮಾಜ ಸೇವಕರಾಗಿದ್ದ ದಿ. ಸೇಠ್ ಶಂಕರಲಾಲ್ ಗಿಲ್ಡಾ ಅವರ ಸ್ಮರಣಾರ್ಥ ಗುರುವಾರ ನಗರದ ಜೇವರ್ಗಿ ರಸ್ತೆಯ ಆರೋಗ್ಯ ಲೈಫ್ ಕೇರ್ ಆಸ್ಪತ್ರೆಯಲ್ಲಿ ಜಿ–99 ತಂಡ ಹಾಗೂ ರೋಟರಿ ಕ್ಲಬ್ ಆಫ್‌ ಕಲಬುರಗಿ ನಾರ್ಥ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 85 ಜನ ರಕ್ತದಾನ ಮಾಡಿದರು. 

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಅವರು ಶಿಬಿರಕ್ಕೆ ಚಾಲನೆ ನೀಡಿದರು. ಗಿಲ್ಡಾ ಅವರ ಕುಟುಂಬದ ಸಂಪತ್ ಗಿಲ್ಡಾ, ಸಂಗೀತಾ ಗಿಲ್ಡಾ, ಜಿ–99 ತಂಡದ ಶರಣಬಸಪ್ಪ ಪಪ್ಪಾ ಹಾಗೂ ಅವರ ಕುಟುಂಬದವರು ಸೇರಿದಂತೆ ಹಲವರು ರಕ್ತದಾನಿ ಶಿಬಿರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದಿನೇಶ್ ಪಾಟೀಲ, ಡಾ. ಝೋಹರ್ ಖಲೀದ್, ಕೆಬಿಎನ್ ಆಸ್ಪತ್ರೆಯ ಪ್ಯಾಥಾಲಜಿ ವಿಭಾಗದ ಡಾ. ಗೀತಾಂಜಲಿ ಜೀವಣಗಿ, ಶಿವರಾಜ ಖೂಬಾ, ಸರ್ವೆಶ್ ಗಿಲ್ಡಾ, ಸುಮಾ ಪಪ್ಪಾ, ಮಲ್ಲಿಕಾರ್ಜುನ ನಾಗೂರ, ಆನಂದ ದಂಡೋತಿ, ಮಹಾದೇವ ಸಲಗರ, ಮಹಾದೇವ ಖೇಣಿ, ಸಂಪತ್ ಪಾಟೀಲ, ಶರಣು ಭಾಗೋಡಿ, ಚನ್ನು ಲಿಂಗನವಾಡಿ, ರೇವಣಸಿದ್ದ ಮದರಿ, ಮಹಾನಗರ ಪಾಲಿಕೆ ಸದಸ್ಯ ಸುನೀಲ ಬನಶೆಟ್ಟಿ, ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಬಸವರಾಜ ಖಂಡೇರಾವ, ಸಂಪತ್ ತಪಾಡಿಯಾ, ಬಾಬುರಾವ್ ಶೇರಿಕಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT