ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಸೌದಿಯಲ್ಲಿದ್ದ ವ್ಯಕ್ತಿ ಜೀತದಿಂದ ಮುಕ್ತಿ

Last Updated 9 ಜನವರಿ 2020, 15:05 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಜವಾಹರನಗರ ತಾಂಡಾದ 48 ವರ್ಷ ವಯಸ್ಸಿನ ಫೂಲಸಿಂಗ್‌ ಮೋಹನ ಚವ್ಹಾಣ ಮಧ್ಯವರ್ತಿಯನ್ನು ನಂಬಿ ಸೌದಿಗೆ ಹೋಗಿ ಜೀತದಾಳಾಗಿದ್ದರು. ಮಧ್ಯವರ್ತಿಯೊಬ್ಬರು ವಾಹನ ಚಲಾಯಿಸುವ ಕೆಲಸಕ್ಕೆಂದು ತಾಂಡಾದಿಂದ ಸೌದಿಗೆ ಕಳುಹಿಸಿದ್ದರು. ಆದರೆ ಸೌದಿಯಲ್ಲಿ ಇವರಿಗೆ ಸಿಕ್ಕಿದ್ದು ಕುರಿ ಮೇಯಿಸುವ ಕೆಲಸ.

ಇದರಿಂದ ಮನೆಯವರೊಂದಿಗಿನ ಸಂಪರ್ಕ ಕಳೆದುಕೊಂಡ ಫೂಲಸಿಂಗ್‌ ಭಾರತಕ್ಕೆ ಮರಳುವುದು ಮುಗಿದ ಅಧ್ಯಾಯ ಎಂದೇ ಭಾವಿಸಿದ್ದರು.

ಇದನ್ನು ತಿಳಿಯುತ್ತಿದ್ದಂತೆ ಭಾರತ ಮತ್ತು ಸೌದಿಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಸಂಸದ ಡಾ. ಉಮೇಶ ಜಾಧವ, ಫೂಲಸಿಂಗ್‌ ಮೋಹನ ಚವ್ಹಾಣ ಪತ್ತೆ ಹಚ್ಚಿ ಭಾರತಕ್ಕೆ ಮರಳಿಸಲು ಕೋರಿದ್ದರು. ಅದರಂತೆ ಫೂಲಸಿಂಗ್‌ ಅವರನ್ನು ಸೌದಿಯ ಅಧಿಕಾರಿಗಳು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಧನಸಿಂಗ್‌ ನಾಯಕ ತಾಂಡಾದ ಮುಖಂಡ ಲಿಂಬಾಜಿ ರಾಠೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಭಾರತಕ್ಕೆ ಮರಳಿ ಬರುತ್ತೇನೆ ನನ್ನ ಪತ್ನಿ, ಮಕ್ಕಳ ಮುಖ ನೋಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಸಂಸದ ಡಾ. ಉಮೇಶ ಜಾಧವ ನನಗೆ ಪುನರ್‌ ಜನ್ಮನೀಡಿದ್ದಾರೆ. ಅವರಿಂದಾಗಿಯೇ ನಾನು ಮರಳಿ ನನ್ನ ತಾಂಡಾಕ್ಕೆ ಬಂದಿದ್ದೇನೆ’ ಎಂದು ಫೂಲಸಿಂಗ್‌ ತಿಳಿಸಿದರು. ಅವರು ತಾಂಡಾಕ್ಕೆ ಬಂದು 2 ತಿಂಗಳು ಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT