ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಕಲಿಸುವ ಕಾಯಕ ಶ್ಲಾಘನೀಯ: ನಟ ಚೇತನ್

Last Updated 26 ಜನವರಿ 2022, 3:04 IST
ಅಕ್ಷರ ಗಾತ್ರ

ಕಲಬುರಗಿ: ‘ಶಾಲೆಯಿಂದ ಹೊರಗುಳಿದ ಕೊಳೆಗೇರಿಯ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದರ ಜೊತೆಗೆ ಸಂಜೆ ಪಾಠಶಾಲೆ ನಡೆಸುವ ಮೂಲಕ ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕ ಮಾಡುತ್ತಿರುವ ಕೆಲಸ ಶ್ಲಾಘನೀಯ‘ ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು.

ನಗರದಲ್ಲಿ ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಹಾಗೂ ಶೇಖ್ ಫಾತಿಮಾ ಅವರ ಜನ್ಮದಿನದ ನಿಮಿತ್ತ ಮಕ್ಕಳಿಗೆ ನೋಟ್‌ ಪುಸ್ತಕ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಕೊಳೆಗೇರಿಗಳಲ್ಲಿ ಶಿಕ್ಷಣ ನೀಡುತ್ತಿರುವವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕೊರೊನಾ ಕಾಲದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಚೇತನ ಪ್ರತಿಷ್ಠಾನದಿಂದ ನೀಡಲಾದ ಕಿಟ್‌ಗಳನ್ನು ಸ್ಲಂ ಜನಾಂದೋಲನದ ರೇಣುಕಾ ಸರಡಗಿ ಹಾಗೂ ತಂಡದವರು ತಲುಪಿಸಿದ್ದನ್ನು ಮೆಲುಕು ಹಾಕಿದರು.

ಸಾಮಾಜಿಕ ಹೋರಾಟಗಾರ್ಗಿ ಮೀನಾಕ್ಷಿ ಬಾಳಿ, ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ರೇಣುಕಾ ಸರಡಗಿ, ಸುನಿತಾ ಕೊಲ್ಲೂರ, ಬಿ.ಎಂ. ಕಪನಿಗೌಡ, ಫಾ. ವಿಕ್ಟರ್, ಫಾರೂಕ್ ಅಹ್ಮದ್ ಮನ್ಸೂರ್, ಭೀಮಾಶಂಕರ ತದ್ದೇವಾಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಂತೋಷ ಮೇಲ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT