ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನಸ್ಸಿನ ಅಪೇಕ್ಷೆ ಅರಿತು ಪ್ರೋತ್ಸಾಹಿಸಿ; ಬಸವರಾಜ ಪಾಟೀಲ ಸೇಡಂ

Last Updated 10 ಜುಲೈ 2022, 13:56 IST
ಅಕ್ಷರ ಗಾತ್ರ

ಕಲಬುರಗಿ: ‘ಪೋಷಕರು ತಮ್ಮ ಮಕ್ಕಳ ಮನಸ್ಸಿನಲ್ಲಿ ಇರುವ ಅಪೇಕ್ಷೆಗಳನ್ನು ಅರಿತು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಅಗತ್ಯ’ ಎಂದುಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ಭಾನುವಾರ ನಗರದಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ಶಾಸ್ತಾ ಮುದ್ದಾ ಬರೆದ ‘ಫೆದರ್ ವರ್ಲ್ಡ್’ ಮತ್ತು ‘ದಿ ಫೀನಿಕ್ಸ್ ಆಫ್ ದಿ ಫ್ಯೂಚರ್’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ತಾಯಿ–ತಂದೆ ಕಣ್ಣು ತೆರೆದು ತಮ್ಮ ಮಕ್ಕಳ ಮನಸ್ಸನ್ನು ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ. ದೇಶದ ದುರಂತವೆಂದರೆ ಬಹುತೇಕ ಪೋಷಕರು ತಮ್ಮ ಮಕ್ಕಳ ಮನಸ್ಸನ್ನು ಅರ್ಥೈಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ತಮ್ಮ ಆಸೆ, ಆಕಾಂಕ್ಷೆಗಳನ್ನು ಅವರ ಮೇಲೆ ಹೇರಿ ಅವರನ್ನು ಸಂಕುಚಿತಗೊಳಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದ ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳಾದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳನ್ನು ಸೇರುವ ಪ್ರತಿ 100 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ತಮ್ಮ ಓದನ್ನು ಅರ್ಧಕ್ಕೇ ತ್ಯಜಿಸುತ್ತಿದ್ದಾರೆ. ಅವರೆಲ್ಲ ಪೋಷಕರ ಒತ್ತಡಕ್ಕೋ, ಆಸೆಗೂ ಮಣಿದು ಐಐಟಿ ಸೇರಿಕೊಂಡವರು. ಮಕ್ಕಳ ಅಭಿಲಾಷೆಯನ್ನು ಸರಿಯಾಗಿ ತಿಳಿದುಕೊಂಡು ಅವರಿಗೆ ಸ್ವಲ್ಪವೇ ಪ್ರೋತ್ಸಾಹ ನೀಡಿದರೆ ಶೇ 100ರಷ್ಟು ಯಶಸ್ಸು ಸಾಧಿಸುತ್ತಾರೆ’ ಎಂದು ಸಲಹೆ ನೀಡಿದರು.

ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ಮಾತನಾಡಿ,‘ಮಾನವ ಸಂಬಂಧಿತ ವಿಷಯಗಳ ಕುರಿತು ಕಲ್ಪಿತ ಕಥೆ, ಕಾದಂಬರಿ, ನಾಟಕ ಬರೆಯುವುದು ಸುಲಭ. ಆದರೆ, ಪ್ರಾಣಿ ಪಕ್ಷಿಗಳ ಜೀವನಾಧಾರಿತ ಕಾಲ್ಪನಿಕ ಕಥೆಗಳನ್ನು ಬರೆಯುವುದು ಕಷ್ಟ. ಅದನ್ನು 11ನೇವಯಸ್ಸಿನಲ್ಲೇಶಾಸ್ತಾ ಮುದ್ದಾ ಕರಗತಮಾಡಿಕೊಂಡಿದ್ದಾಳೆ.ಅವಳಿಗೆಇದೇರೀತಿಯಪ್ರೋತ್ಸಾಹನೀಡಿದರೆ ಮುಂದೆ ಅಮೆರಿಕದಲ್ಲಿ ಭಾರತೀಯ ಸಾಂಸ್ಕೃತಿಕ ರಾಯಭಾರಿ ಆಗಬಲ್ಲಳು’ ಎಂದು ಅಭಿಪ್ರಾಯಪಟ್ಟರು.

‘ಶಾಸ್ತಾ ಬರೆದ ಎರಡು ಪುಸ್ತಕಗಳು ಎಲ್ಲಾ ಸಾರ್ವಜನಿಕ ಮತ್ತು ಶಾಲಾ ಗ್ರಂಥಾಲಯಗಳಲ್ಲಿ ಇರಿಸಬೇಕು. ಮಕ್ಕಳು ಈ ಪುಸ್ತಕಗಳನ್ನು ಓದಿ, ಪ್ರೇರಣೆ ಪಡೆದು ಅವರಲ್ಲಿಯೂ ಇಂತಹ ಯಾವುದಾದರೂ ಒಂದು ಸಾಧನೆ ಮಾಡುವಂತೆ ಆಗಬೇಕು. ಪೋಷಕರು ತಮ್ಮ ಮಕ್ಕಳ ಪ್ರತಿಭೆಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಹೇಳಿದರು.

ಗುರುಕುಲ ಸ್ವತಂತ್ರ್ಯ ಪಿಯು ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಶ್ಯಾಮಸುಂದರ ಕುಲಕರ್ಣಿ ಮಾತನಾಡಿ, ‘ಶಾಸ್ತಾ ತನ್ನ ಪುಸ್ತಕಗಳ ಮಾರಾಟದಿಂದ ಬಂದ ಹಣವನ್ನು ಕಲ್ಯಾಣ ಕರ್ನಾಟಕ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸುತ್ತಿದ್ದಾಳೆ. ಅವಳ ಸಮಾಜ ಸೇವಾ ಕಾರ್ಯ ಅಮೆರಿಕ ಅಧ್ಯಕ್ಷರ ಶ್ವೇತಭವನಕ್ಕೂ ತಲುಪಿ, ಮೆಚ್ಚುಗೆಯ ಪತ್ರ ಸಹ ಪಡೆದಿದ್ದಾಳೆ. ಪ್ರತಿ ಮಗುವೂ ತನ್ನದೇಯಾದ ಚಿಂತನಾ ಶಕ್ತಿ ಹೊಂದಿರುತ್ತದೆ. ಪೋಷಕರು ಅದಕ್ಕೆ ಪ್ರೋತ್ಸಾಹ ನೀಡಿದರೇ ಬಹು ದೊಡ್ಡ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಶಾಸ್ತಾ ಒಂದು ಬಹುದೊಡ್ಡ ಉದಾಹರಣೆ’ಎಂದರು.

ಸಿದ್ದಲಿಂಗೇಶ್ವರ ಪ್ರಕಾಶನದ ಅಧ್ಯಕ್ಷ ಬಸವರಾಜ ಕೊನೇಕ್, ಸರ್ವಜ್ಞ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಿಜಯ ನಾಲವಾರ,ಶಾಸ್ತಾ ಮುದ್ದಾ ಇದ್ದರು.

*ಪ್ರಸ್ತುತ ದಿನಗಳಲ್ಲಿ ತಾಯಿ–ತಂದೆ ತಮ್ಮ ಮಗುವಿನ ಮನಸ್ಸಲ್ಲಿ ಇರುವುದನ್ನು ತಿಳಿದುಕೊಂಡು, ಅದರ ಇಚ್ಛೆಯಂತೆ ಶಿಕ್ಷಣ ಕೊಡಿಸವುದರತ್ತ ಗಮನಹರಿಸಬೇಕಿದೆ
-ಬಸವರಾಜ ಪಾಟೀಲ ಸೇಡಂ, ಕ.ಕ ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT