ಶನಿವಾರ, ನವೆಂಬರ್ 28, 2020
26 °C

ಬೆಳೆ ಸಮೀಕ್ಷೆ: ಆಕ್ಷೇಪಣೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪ್ರಸಕ್ತ 2020-21ನೇ ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ರೈತರು ತಮ್ಮ ಜಮೀನುಗಳಲ್ಲಿ ನಮೂದಾಗಿರುವ ಬೆಳೆಗಳ ಕುರಿತು ಬೆಳೆ ದರ್ಶಕ ಆ್ಯಪ್ ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ದಾಖಲಿಸಲು ನ. 16ರೊಳಗಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ರೈತರು ತಮ್ಮ ಸ್ಮಾರ್ಟ್ ಪೋನ್‍ನಲ್ಲಿ ಬೆಳೆ ದರ್ಶಕ-2020 ಆಪ್ ಡೌನ್‍ಲೋಡ್ ಮಾಡಿಕೊಂಡು ಬೆಳೆ ಮಾಹಿತಿ ಪರಿಶೀಲಿಸಿಕೊಳ್ಳಬೇಕು. ಈ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಬೆಳೆ ದರ್ಶಕ್ ಆ್ಯಪ್‌ನಲ್ಲಿ ಸಲ್ಲಿಸಬಹುದು. ಅವಧಿ ಮುಗಿದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ.

ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬೆಳೆ ವಿಮೆ, ಬೆಳೆ ಪರಿಹಾರ, ಕನಿಷ್ಟ ಬೆಂಬಲ ಬೆಲೆ, ವಿಪತ್ತು ನಿರ್ವಹಣೆ ಮತ್ತು ಇತರೆ ಸರ್ಕಾರದ ಸಹಾಯಧನ ನೀಡುವ ಯೋಜನೆಗೆ ಬಳಸಿಕೊಳ್ಳಲಾಗುವುದರಿಂದ ರೈತರುಗಳು ತಮ್ಮ ಒಪ್ಪಿಗೆ ಪತ್ರದ ಜೊತೆಗೆ, ಆಧಾರ ಕಾಡ್ ವಿವರಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ.

ರೈತರು ತಮ್ಮ ಆಧಾರ್‌ ಕಾರ್ಡ್‌ ಪ್ರತಿಯನ್ನು ಬೆಳೆ ಸಮೀಕ್ಷೆ ಕೈಗೊಂಡ ಗ್ರಾಮದ ಖಾಸಗಿ ನಿವಾಸಿ (ಪಿ.ಆರ್‌.ಗೆ) ಸಲ್ಲಿಸಬೇಕು. ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಸಂಪರ್ಕಿಸಲು ಕೋರಲಾಗಿದೆ.‌

ಸಂವಾದ

ಕಲಬುರ್ಗಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಅವರು ಇಲ್ಲಿನ ಅಂಧ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಗುರುವಾರ, ಅಂಗನಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು.

ನಿಗಮದಡಿ ಇರುವ ಕಿರುಸಾಲ ಯೋಜನೆಯು ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಒಗ್ಗಟ್ಟಿನಿಂದ ಚಟುವಟಿಕೆ ಮಾಡಲು ಸಾಲ ಸೌಲಭ್ಯ ದೊರೆಯುತ್ತವೆ ಮತ್ತು ಸದರಿ ಯೋಜನೆಯ ಉದ್ದೇಶಗಳು, ಸಾಲ ತೆಗೆದುಕೊಳ್ಳಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಗಳು, ತೆಗೆದುಕೊಂಡ ಸಾಲದ ಮರುಪಾವತಿಯ ಬಗ್ಗೆ ಹಾಗೂ ಆರ್ಥಿಕವಾಗಿ ಮಹಿಳಾ ಸ್ವಾವಲಂಬನೆ ಆಗಬೇಕೆಂದರು.

‌ಅಥಿತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಕಡ್ಲಾ, ನಿಗಮದ ಪ್ರಭಾರಿ ಅಭಿವೃದ್ಧಿ ನೀರಿಕ್ಷಕಿ ಅರುಣಾ ಗೋಟುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ವೆಂಕಟೇಶ ದೇಶಪಾಂಡೆ, ಮಹಿಳಾ ಕಲ್ಯಾಣ ಅಧಿಕಾರಿ ಉಮಾ ಪೂಜಾರಿ, ಜಿಲ್ಲಾ ಸಂಯೋಜಕಿಯರಾದ ಪೂಜಾ, ಪ್ರಧಾನ ಮಂತ್ರಿ ಮಾತ್ರವಂದನಾ ಯೋಜೆನೆಯ ಜಿಲ್ಲಾ ಸಂಯೋಜಕಿ ವಿಜಯಲಕ್ಷೀ ಜಾಧವ, ಮಾತೃವಂದನಾ ಯೋಜನೆಯ ಸಂಯೋಜಕಿ ಜಿಜಾ ಆಗಮಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.