ಕಾರುಗಳ ಮಧ್ಯೆ ಡಿಕ್ಕಿ; 10 ಜನರಿಗೆ ಗಂಭೀರ ಗಾಯ

7

ಕಾರುಗಳ ಮಧ್ಯೆ ಡಿಕ್ಕಿ; 10 ಜನರಿಗೆ ಗಂಭೀರ ಗಾಯ

Published:
Updated:

ಕಲಬುರ್ಗಿ: ಸೇಡಂ ತಾಲ್ಲೂಕು ಚಿಂಚೋಳಿ ಕ್ರಾಸ್ ಬಳಿಕ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೇಡಂ ಪಟ್ಟಣದ ಮಹೇಶ ಶಂಕರ, ಸೈಯದ್ ಇರ್ಫಾನ್, ಸೈಯದ್ ಮುಸ್ತಫಾ, ಮಹ್ಮದ್ ಬಿಲಾಸ, ಉಮರ್, ತೆಲಂಗಾಣ ರಾಜ್ಯದ ನಾರಾಯಣಪೇಟನ ಶುಭಂ ಖುರೇಶಿ, ರಫೀಕ್, ಫಾರುಕ್, ಮೊಘಲಯ್ಯ ಮತ್ತು ಇರ್ಫಾನ್ ಗಾಯಗೊಂಡವರು.
ಗಾಯಾಳುಗಳಿಗೆ ಸೇಡಂ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ತರಲಾಗುತ್ತಿದೆ.
ಒಂದು ಕಾರು ಸೇಡಂನತ್ತ ತೆರಳುತ್ತಿತ್ತು. ಇನ್ನೊಂದು ಕಾರು ತೆಲಂಗಾಣ ರಾಜ್ಯದ ನಾರಾಯಣಪೇಟದಿಂದ ಕಲಬುರ್ಗಿಯತ್ತ ಬರುತ್ತಿತ್ತು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !