ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಕನಸಿನಲ್ಲಿ...

Last Updated 11 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಆಲ್‌ ಇಂಗ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಹಿರಿಮೆ ಕರ್ನಾಟಕದ ಪ್ರಕಾಶ್‌ ಪಡುಕೋಣೆ ಅವರದ್ದು. ಆ ನಂತರ ಈ ಹಾದಿಯಲ್ಲಿ ಚಿನ್ನದ ಹೆಜ್ಜೆ ಇಟ್ಟವರು ಪುಲ್ಲೇಲಾ ಗೋಪಿಚಂದ್‌. ಇವರ ನಂತರ ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ಆಯಾಮ ನೀಡಿದವರು ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌. ಸೈನಾ, ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಬೆಳ್ಳಿ ಗೆದ್ದ ದೇಶದ ಮೊದಲ ಆಟಗಾರ್ತಿ. ಮಾರ್ಚ್‌ 14ರಿಂದ 18ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತೊಮ್ಮೆ ಬ್ಯಾಡ್ಮಿಂಟನ್‌ ಸೊಬಗು ಅನಾವರಣಗೊಳ್ಳಲಿದ್ದು ಭಾರತದ ಸ್ಪರ್ಧಿಗಳು 17 ವರ್ಷಗಳಿಂದ ಕಾಡುತ್ತಿರುವ ಚಿನ್ನದ ಕೊರಗು ನೀಗಿಸುವ ಭರವಸೆ ಚಿಗುರೊಡೆದಿದೆ.

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಕುರಿತು...

ಆಲ್‌ ಇಂಗ್ಲೆಂಡ್‌ ಓಪನ್‌, ವಿಶ್ವದ ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಒಂದು. 1899ರಲ್ಲಿ ಆರಂಭವಾದ ಈ ಚಾಂಪಿಯನ್‌ಷಿಪ್‌ ವರ್ಷಕ್ಕೊಮ್ಮೆ ನಡೆಯುತ್ತದೆ. ಇದಕ್ಕೆ 2007ರಲ್ಲಿ ಸೂಪರ್‌ಸೀರಿಸ್‌ ಹಾಗೂ 2011ರಲ್ಲಿ ಸೂಪರ್‌ಸೀರಿಸ್‌ ಪ್ರೀಮಿಯರ್‌ ಮಾನ್ಯತೆ ನೀಡಲಾಗಿತ್ತು. ಚೊಚ್ಚಲ ಆವೃತ್ತಿಯಲ್ಲಿ ಸಿಂಗಲ್ಸ್‌ ವಿಭಾಗದ ಪಂದ್ಯಗಳು ನಡೆದಿರಲಿಲ್ಲ. ಮರು ವರ್ಷ (1900) ಸಿಂಗಲ್ಸ್‌ ವಿಭಾಗ ಸೇರ್ಪಡೆ ಮಾಡಲಾಗಿತ್ತು. ಇಂಗ್ಲೆಂಡ್‌ನ ಜಾರ್ಜ್‌ ಅಲನ್‌ ಥಾಮಸ್‌, ಚಾಂಪಿಯನ್‌ಷಿಪ್‌ನ ಯಶಸ್ವಿ ಆಟಗಾರ ಎನಿಸಿದ್ದಾರೆ. ಸಿಂಗಲ್ಸ್‌ನಲ್ಲಿ ನಾಲ್ಕು ಪ್ರಶಸ್ತಿ ಗೆದ್ದಿರುವ ಅವರು ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಕ್ರಮವಾಗಿ 9 ಮತ್ತು 8 ಟ್ರೋಫಿಗಳನ್ನು ಎತ್ತಿಹಿಡಿದಿದ್ದಾರೆ.

ಸೈನಾ ನೆಹ್ವಾಲ್‌

ಸೈನಾ ಒಲಿಂಪಿಕ್ಸ್‌ ಸಾಧನೆ

ವರ್ಷ,ಸಾಧನೆ

2008,ಕ್ವಾರ್ಟರ್‌ ಫೈನಲ್‌

2012,ಕಂಚು

2016,ಗುಂಪು ಹಂತ

*******

2017ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಹಾದಿ

ಸುತ್ತು,ಎದುರಾಳಿ,ಫಲಿತಾಂಶ,ಸ್ಕೋರ್‌

ಮೊದಲನೇ,ಬೈ

ಎರಡನೇ,ಸಬ್ರಿನಾ ಜಾಕ್ವೆಟ್‌,ಗೆಲುವು,21–11, 21–12,

ಮೂರನೇ,ಸಂಗ್‌ ಜಿ ಹ್ಯೂನ್‌,ಗೆಲುವು,21–19, 21–15

ಕ್ವಾರ್ಟರ್ ಫೈನಲ್‌,ಕರ್ಸ್ಟಿ ಗಿಲ್‌ಮೌರ್‌,ಗೆಲುವು,21–19, 18–21, 21–15

ಸೆಮಿಫೈನಲ್‌,ನಜೋಮಿ ಒಕುಹರಾ,ಸೋಲು,21–12, 17–21, 10–21

***********

ವೃತ್ತಿಬದುಕಿನ ಸಿಂಗಲ್ಸ್‌ ಸಾಧನೆ

ಪಂದ್ಯ: 477

ಗೆಲುವು: 339

ಸೋಲು: 138

******

ವೃತ್ತಿಬದುಕಿನ ಡಬಲ್ಸ್‌ ಸಾಧನೆ

ಪಂದ್ಯ: 33

ಗೆಲುವು: 9

ಸೋಲು: 24

**********

ಸಿಂಗಲ್ಸ್‌ ಸಾಧನೆ

ಸೂಪರ್‌ ಸೀರಿಸ್‌ ಪ್ರೀಮಿಯರ್‌: 4

ಸೂಪರ್‌ ಸೀರಿಸ್‌: 6

ಗ್ರ್ಯಾನ್‌ ಪ್ರಿಕ್ಸ್‌ ಗೋಲ್ಡ್‌: 8

ಗ್ರ್ಯಾನ್‌ ಪ್ರಿ: 1

ಇತರೆ: 4

*********

ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಸಾಧನೆ

ವರ್ಷ,ಸುತ್ತು

2007,ಎರಡನೇ

2008,ಮೊದಲನೇ

2009,ಮೊದಲನೇ

2010,ಸೆಮಿಫೈನಲ್‌

2011,ಕ್ವಾರ್ಟರ್‌ ಫೈನಲ್‌

2012,ಕ್ವಾರ್ಟರ್‌ ಫೈನಲ್‌

2013,ಸೆಮಿಫೈನಲ್‌

2014,ಕ್ವಾರ್ಟರ್‌ ಫೈನಲ್‌

2015,ಬೆಳ್ಳಿ

2016,ಕ್ವಾರ್ಟರ್‌ ಫೈನಲ್‌

******

23 ಸಿಂಗಲ್ಸ್‌ ವಿಭಾಗದಲ್ಲಿ ಗೆದ್ದ ಒಟ್ಟು ಪ್ರಶಸ್ತಿಗಳು

2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಹೆಗ್ಗಳಿಕೆ.

10 ಸೂಪರ್‌ ಸೀರಿಸ್‌ ಟೂರ್ನಿಗಳಲ್ಲಿ ಗೆದ್ದ ಟ್ರೋಫಿಗಳು.

2 ಕಾಮನ್‌ವೆಲ್ತ್‌ ಯೂತ್‌ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳು (ಒಂದು ಚಿನ್ನ ಮತ್ತು ಬೆಳ್ಳಿ).

*******

2017–18ರ ಪ್ರಮುಖ ಸಾಧನೆಗಳು

*ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ಹಿರಿಮೆ

*ಮಲೇಷ್ಯಾ ಓಪನ್‌ ಗ್ರ್ಯಾನ್‌ ‍ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ

*ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ.

*ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ರನ್ನರ್‌ ಅಪ್‌.

ಪಿ.ವಿ.ಸಿಂಧು

ಸಿಂಗಲ್ಸ್‌ ಸಾಧನೆ

ಆಡಿದ ಪಂದ್ಯಗಳು: 346

ಗೆಲುವು: 242

ಸೋಲು: 104

***‌

ಡಬಲ್ಸ್‌ ಸಾಧನೆ

ಪಂದ್ಯ: 17

ಗೆಲುವು: 9

ಸೋಲು: 8

****

2017ರ ಸಿಂಗಲ್ಸ್‌ ಸಾಧನೆ

ಪಂದ್ಯ: 52

ಗೆಲುವು: 40

ಸೋಲು: 12

***********

2017ರ ಸಾಧನೆ

*ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಕಿರೀಟ.

*ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ

*ಕೊರಿಯಾ ಓಪನ್‌ನಲ್ಲಿ ಚಾಂಪಿಯನ್‌ ಪಟ್ಟ.

*ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ

*ಹಾಂಕಾಂಗ್ ಓಪನ್‌ನಲ್ಲಿ ರನ್ನರ್‌ ಅಪ್‌

*ಸೂಪರ್‌ ಸೀರಿಸ್‌ ಫೈನಲ್ಸ್‌ನಲ್ಲಿ ರನ್ನರ್‌ ಅಪ್‌

*********

ಆಲ್‌ ಇಂಗ್ಲೆಂಡ್‌ ಓಪನ್‌ ಸಾಧನೆ

ವರ್ಷ,ಸುತ್ತು

2012,ಮೊದಲನೇ

2013,ಎರಡನೇ

2014,ಮೊದಲನೇ

2016,ಮೊದಲನೇ

2017,ಕ್ವಾರ್ಟರ್‌ ಫೈನಲ್‌

**********

*ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಏಕೈಕ ಬ್ಯಾಡ್ಮಿಂಟನ್‌ ಆಟಗಾರ್ತಿ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ.

*2017ರಲ್ಲಿ ನಡೆದಿದ್ದ ಕೊರಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಶ್ರೇಯ ಅವರದ್ದಾಗಿದೆ.

3 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಪದಕಗಳು.

10 ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು ಗೆದ್ದ ಪ್ರಶಸ್ತಿಗಳು

********

ಕೆ.ಶ್ರೀಕಾಂತ್‌

ಸಿಂಗಲ್ಸ್‌ ಸಾಧನೆ

ಪಂದ್ಯ: 257

ಗೆಲುವು:174

ಸೋಲು: 83

*******

11 ವೃತ್ತಿಬದುಕಿನಲ್ಲಿ ಗೆದ್ದ ಒಟ್ಟು ಪ್ರಶಸ್ತಿಗಳು

2 ದಕ್ಷಿಣ ಏಷ್ಯನ್‌ ಕ್ರೀಡಾಕೂಟದ ಸಿಂಗಲ್ಸ್‌ ಮತ್ತು ತಂಡ ವಿಭಾಗದಲ್ಲಿ ಗೆದ್ದ ಚಿನ್ನ

2 ಕಾಮನ್‌ವೆಲ್ತ್‌ ಯೂತ್‌ ಕ್ರೀಡಾಕೂಟದಲ್ಲಿ ಗೆದ್ದ ಪದಕ

6 ವಿಶ್ವ ಸೂಪರ್‌ಸೀರಿಸ್‌ ಮತ್ತು ಸೂಪರ್‌ಸೀರಿಸ್‌ ಪ್ರೀಮಿಯರ್‌ ಟೂರ್ನಿಗಳಲ್ಲಿ ಗೆದ್ದ ಟ್ರೋಫಿಗಳು

********

2017ರ ಪ್ರಮುಖ ಸಾಧನೆ

*ಫ್ರೆಂಚ್‌ ಓಪನ್‌ನಲ್ಲಿ ಸಿಂಗಲ್ಸ್‌ ಗರಿ

*ಡೆನ್ಮಾರ್ಕ್ ಓ‍ಪನ್‌ನಲ್ಲಿ ಕಿರೀಟ

*ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚಾಂಪಿಯನ್‌ ಪಟ್ಟ

*ಇಂಡೊನೇಷ್ಯಾ ಓಪನ್‌ನಲ್ಲಿ ಪ್ರಶಸ್ತಿ

*ಸಿಂಗಪುರ ಓಪನ್‌ನಲ್ಲಿ ರನ್ನರ್‌ ಅಪ್‌

***********

ಬಿ.ಸಾಯಿ‍ಪ್ರಣೀತ್‌

* 5 ಬಿಡಬ್ಲ್ಯುಎಫ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌/ಸೀರಿಸ್‌ನಲ್ಲಿ ಗೆದ್ದ ಪ್ರಶಸ್ತಿಗಳು

2 ಗ್ರ್ಯಾನ್‌ ಪ್ರಿ ಮತ್ತು ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಗಳಲ್ಲಿ ಜಯಿಸಿದ ಟ್ರೋಫಿ

*******

2017ರ ಸಾಧನೆ

*ಥಾಯ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌

*ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ರನ್ನರ್‌ ಅಪ್‌

*ಸಿಂಗಪುರ ಓಪನ್‌ನಲ್ಲಿ ಚೊಚ್ಚಲ ಕಿರೀಟ

*************

ಎಚ್‌.ಎಸ್‌.ಪ್ರಣಯ್‌

3 ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಗೆದ್ದ ಪ್ರಶಸ್ತಿಗಳು

2 ಬಾರಿ ಇಂಟರ್‌ನ್ಯಾಷನಲ್‌ ಚಾಲೆಂಜ್‌/ಸೀರಿಸ್‌ನಲ್ಲಿ ರನ್ನರ್‌ ಅಪ್‌ ಆಗಿದ್ದಾರೆ

*****

2017ರ ಸಾಧನೆ

*ಅಮೆರಿಕ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ

ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಚಿನ್ನ ಗೆದ್ದ ಭಾರತೀಯರು

ವರ್ಷ: 1980

ಆಟಗಾರ: ಪ್ರಕಾಶ್‌ ಪಡುಕೋಣೆ

ಎದುರಾಳಿ: ಲಿಯೆಮ್‌ ಸ್ವೀ ಕಿಂಗ್‌

ಸ್ಕೋರ್‌: 15–3, 15–10

********

ವರ್ಷ: 2001

ಆಟಗಾರ: ಪುಲ್ಲೇಲಾ ಗೋಪಿಚಂದ್‌

ಎದುರಾಳಿ: ಚೆನ್‌ ಹಾಂಗ್‌

ಸ್ಕೋರ್‌: 15–12, 15–6

*******

ಡಬಲ್ಸ್‌

ಮನು ಅತ್ರಿ

ಬಿ.ಸುಮೀತ್‌ ರೆಡ್ಡಿ

**

ಸಾತ್ವಿಕ್‌ಸಾಯಿರಾಜ್‌ ರಂಕಿರೆಡ್ಡಿ

ಚಿರಾಗ್‌ ಶೆಟ್ಟಿ

********

ಡಬಲ್ಸ್‌

ಜಕ್ಕಂಪುಡಿ ಮೇಘನಾ

ಪೂರ್ವಿಶಾ ಎಸ್‌.ರಾಮ್‌

***

ಅಶ್ವಿನಿ ‍ಪೊನ್ನ‍ಪ್ಪ

ಎನ್‌.ಸಿಕ್ಕಿ ರೆಡ್ಡಿ

*******

ಮಿಶ್ರ ಡಬಲ್ಸ್‌

ಪ್ರಣವ್‌ ಜೆರ‍್ರಿ ಚೋಪ್ರಾ

ಎನ್‌.ಸಿಕ್ಕಿ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT