ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 500ಕ್ಕೂ ಅಧಿಕ ಆಟೊಗಳ ವಿರುದ್ಧ ಪ್ರಕರಣ

Last Updated 24 ನವೆಂಬರ್ 2022, 15:32 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೊರವಲಯದ ಹುಮನಾಬಾದ್ ರಿಂಗ್ ರೋಡ್ ಬಳಿ ಗುರುವಾರ ಬೆಳಿಗ್ಗೆ ಜಂಟಿ ದಾಳಿ ನಡೆಸಿದ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪರ್ಮಿಟ್, ಚಾಲನಾ ಲೈಸೆನ್ಸ್ ಇಲ್ಲದ 500ಕ್ಕೂ ಅಧಿಕ ಆಟೊಗಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಯಿತು.

ಪರ್ಮಿಟ್ ಇಲ್ಲದೇ ಆಟೊಗಳನ್ನು ಓಡಿಸುತ್ತಿರುವ ಬಗ್ಗೆ ಆಟೊ ಚಾಲಕರ ಸಂಘದವರು ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಅತಿ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ ಎಂದು ಸಾರ್ವಜನಿಕರೂ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ದಾಳಿ ನಡೆಸಿದಾಗ ಫಿಟ್ನೆಸ್, ಲೈಸೆನ್ಸ್, ಪರ್ಮಿಟ್ ಇಲ್ಲದೇ ಸಂಚರಿಸುತ್ತಿರುವುದು ಹಾಗೂ ಅತಿ ದುಬಾರಿ ಬಾಡಿಗೆ ದರ ಪಡೆಯುತ್ತಿರುವುದು ಪತ್ತೆಯಾಯಿತು. ಹೀಗಾಗಿ, ಆಟೊಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಮೋಟಾರು ವಾಹನ ನಿರೀಕ್ಷಕರಾದ ಇಕ್ರಂ ಪಾಷಾ, ಪ್ರಭಾಕರ ಚವ್ಹಾಣ್, ಪಿಐಗಳಾದ ಶಾಂತಿನಾಥ, ಅಮರೇಶ, ಪಿಎಸ್‌ಐಗಳಾದ ಭಾರತಿಬಾಯಿ ಧನ್ನಿ, ಫಾತಿಮಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT