ಬುಧವಾರ, ಜನವರಿ 22, 2020
18 °C
ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಂವಾದ

‘ಸಿರಾಮಿಕ್‌ ತಂತ್ರಜ್ಞರಿಗೆ ಹೆಚ್ಚಿದ ಬೇಡಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಿರಾಮಿಕ್ ವಸ್ತುಗಳಾದ ರಿಫ್ರ್ಯಾಕ್ಟರೀಸ್ (ಅತ್ಯುಷ್ಣ ಸಹಿಷ್ಣು ಇಟ್ಟಿಗೆಗಳು) ಗಳಿಲ್ಲದೇ ಯಾವುದೆ ಸ್ಟೀಲ್, ಸಿಮೆಂಟ್, ಪೆಪ್ಪರ್‌, ಪೆಟ್ರೋಲಿಯಂ, ಅಲ್ಯೂಮಿನಿಯಂ ಕಂಪನಿಗಳು ನಡೆಯುವಂತಿಲ್ಲ. ಅಂತಹ ಸಿರಾಮಿಕ್ ವಸ್ತುಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿರಾಮಿಕ್‌ ತಂತ್ರಜ್ಞರ ಅವಶ್ಯಕತೆ ಹೆಚ್ಚಾಗಿದೆ ಎಂದು ಮುಂಬೈನ ಎ.ಸಿ.ಸಿ. ಸಿಮೆಂಟ್ ಕಂಪನಿಯ ಉಪಾಧ್ಯಕ್ಷ, ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಹಳೆಯ ವಿದ್ಯಾರ್ಥಿ ಉಮೇಶ ಹೊಸೂರ ಅಭಿಪ್ರಾಯಪಟ್ಟರು.

ನಗರದ ಪಿ.ಡಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗವು ದಿ. ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್‌ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಕರ್ನಾಟಕದ ಏಕೈಕ ಸಿರಾಮಿಕ್ ಎಂಜಿನಿಯರಿಂಗ್ ವಿಭಾಗ ಹೊಂದಿರುವ ಪಿ.ಡಿ.ಎ. ಕಾಲೇಜಿನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಎ.ಸಿ.ಸಿ. ಕಂಪನಿಯು ರಿಫ್ರ್ಯಾಕ್ಟರೀಸ್‌ಗಳ ಗುಣಮಟ್ಟವನ್ನು ನಿಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಕಾಲೇಜಿನ ಜೊತೆ ಒಡಂಬಡಿಕೆ ಪತ್ರ (ಎಂ.ಒ.ಯು)ಕ್ಕೆ ಸಹಿ ಹಾಕುವ ಕುರಿತು ವಿಚಾರ ಮಾಡಲಾಗಿದೆ’ ಎಂದರು. 

ಸಿರಾಮಿಕ್ ವಿಭಾಗದ ಮತ್ತೊಬ್ಬ ವಿದ್ಯಾರ್ಥಿ, ಕತಾರ್ ದೇಶದ ಕೆಪ್ ಕಂಪನಿಯ ಆಪರೇಶನ್ಸ್‌ ವಿಭಾಗದ ಮುಖ್ಯಸ್ಥ ಅನ್ವರ್‌ ಹುಸೇನ್  ಮಾತನಾಡಿ, ನಮ್ಮ ಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಉತ್ತಮ ಗ್ರೇಡ್, ತಂತ್ರಜ್ಞಾನ ಹೊಂದಿದ್ದರೂ ತಮ್ಮ ಶೈಕ್ಷಣಿಕ ಸಾಮರ್ಥ್ಯ, ಕೌಶಲ್ಯ ಪ್ರದರ್ಶಿಸುವಲ್ಲಿ ನಾಚಿಕೆ ಸ್ವಭಾವ ಜಾಸ್ತಿ ಇದೆ. ಹೀಗಾಗಿ ಕ್ಯಾಂಪಸ್ ಸಂದರ್ಶನದಲ್ಲಿ ಇತರರಂತೆ ಉದ್ಯೋಗ ಗಿಟ್ಟಿಸುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ದಿ. ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್‌ನ ಕಲಬುರ್ಗಿ ಕೇಂದ್ರದ ಚೇರಮನ್‌ ಬಿ.ಎಸ್. ಮೋರೆ ಮಾತನಾಡಿ, ‘ವಿದ್ಯಾರ್ಥಿಗಳಿಗೆ, ಎಂಜಿನಿಯರ್‌ಗಳಿಗೆ, ಪ್ರಾಧ್ಯಾಕರುಗಳಿಗೆ ಜ್ಞಾನ ಶ್ರೀಮಂತಿಕೆ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ನೆರವು ನೀಡುತ್ತದೆ’ ಎಂದರು.

ಸಿರಾಮಿಕ್‌ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥ ಡಾ. ಅಮರೇಶ ರಾಯಚೂರ ಇದ್ದರು.

ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಡಾ. ಮಹಾದೇವಪ್ಪ ಗಾದಗೆ ಇದ್ದರು. ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕರ ಸ್ವಾಗತಿಸಿದರು. ಪ್ರೊ. ರಂಗದಾಳ ವಂದಿಸಿದರು. ಪ್ರೊ. ಗುಂಡುಕೊಳ್ಳಕುರ, ಡಾ. ವೀರೇಶ ಮಲ್ಲಾಪೂರ ಅತಿಥಿಗಳನ್ನು ಪರಿಚಯಿಸಿದರು. ಆಕಾಶ ವಡಗೇರಿ ನಿರೂಪಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು