ಭಾನುವಾರ, ಜೂನ್ 26, 2022
22 °C

ಸುಸೂತ್ರವಾಗಿ ಮುಗಿದ ಸಿಇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳಿಗೆ ಶನಿವಾರ ಆಯೋಜಿಸಿದ್ದ ಸಿಇಟಿ ಸುಸೂತ್ರವಾಗಿ ಮುಗಿಯಿತು. ಒಟ್ಟು 6,156 ಅಭ್ಯರ್ಥಿಗಳ ಪೈಕಿ 4244 ಮಂದಿ ಪರೀಕ್ಷೆ ಬರೆದರು. 1912 ಮಂದಿ ಗೈರಾದರು.

ನಗರದಲ್ಲಿ ತೆರೆದಿದ್ದ 26 ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮೊದಲ ಪತ್ರಿಕೆ ಹಾಗೂ ಮಧ್ಯಾಹ್ನ 2.30ರಿಂದ 5.30ರವರೆಗೆ ಎರಡನೇ ಪೇಪರ್‌ ಬರೆದರು.

ಬೆಳಿಗ್ಗೆ 9ರ ಸುಮಾರಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಕೈಗೆ ಸ್ಯಾನಿಟೈಸರ್‌ ಹನಿಗಳನ್ನು ನೀಡಲಾಯಿತು. ಗೇಟ್‌ ಬಳಿ ಮೊದಲು ತಪಾಸಣೆ ನಡೆಸಲಾಯಿತು. ಅಲ್ಲಿಂದ 9.30ಕ್ಕೆ ಪರೀಕ್ಷಾ ಕೋಣೆಗೆ ಬಿಡುವ ಮುನ್ನ ಮತ್ತೊಮ್ಮೆ ತಪಾಸಣೆ ಮಾಡಲಾಯಿತು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿ ತಪಾಸಣೆ ನಡೆಸಲಾಯಿತು. ಡಿಡಿಪಿಐ ಅಶೋಕ ಭಜಂತ್ರಿ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಪ್ರಶ್ನೆ ಪತ್ರಿಕೆ, ಒಎಂಆರ್‌ ಶೀಟ್ ಮತ್ತಿತರ ಪರೀಕ್ಷಾ ಸಾಮಗ್ರಿಗಳ ಸಾಗಣೆಗೆ 12 ಮಾರ್ಗಾಧಿಕಾರಿ (ರೂಟ್ಸ್‌) ನಿಯೋಜನೆ ಮಾಡಲಾಗಿತ್ತು. ಪ್ರತಿ ಕೇಂದ್ರದಲ್ಲೂ 13 ಕೊಠಡಿಗಳನ್ನು ಸಿದ್ಧಪಡಿಸಲಾಗಿತ್ತು. ಒಟ್ಟು 15,000 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು