ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ದಿಶಾ ಕಾಲೇಜಿನ ಭೋಜಲಿಂಗಗೆ 665ನೇ ರ‍್ಯಾಂಕ್‌

Last Updated 21 ಸೆಪ್ಟೆಂಬರ್ 2021, 10:47 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಚೆಗೆ ನಡೆದ ಸಿಇಟಿ ಪರೀಕ್ಷೆಗಳಲ್ಲಿ ಇಲ್ಲಿನ ದಿಶಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಭೋಜಲಿಂಗ ಬಸವರಾಜ ಅವರು ಪ್ರಾಣಿ ವಿಜ್ಞಾನ ವಿಭಾಗದಲ್ಲಿ 665ನೇ ರ‍್ಯಾಂಕ್‌, ಬಿಎಸ್‌ಸಿ ಅಗ್ರಿಕಲ್ಚರ್‌ 800, ಫಾರ್ಮಸಿ 999, ಎಂಜಿನಿಯರಿಂಗ್‌ 2663 ರ್‍ಯಾಂಕ್‌ ಪಡೆದು ಸಾಧನೆ ತೋರಿದ್ದಾರೆ.

ನಾಗರಾಜ ಈರಣ್ಣ ಮಗಿ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 2776, ಪ್ರಾಣಿ ವಿಜ್ಞಾನ 3084, ಎಂಜಿನಿಯರಿಂಗ್‌ 4606ನೇ ರ್‍ಯಾಂಕ್‌ ಪಡೆದಿದ್ದಾರೆ.

ಇತರ ವಿದ್ಯಾರ್ಥಿಗಳಾದ ಶ್ವೇತಾ 4112, ರಾಹುಲ್‌ ಮಲ್ಲಿನಾಥ 4358, ವಿಷ್ಣು 6233, ಓಂಕಾರ 6341, ಕಾರ್ತಿಕ್‌ ನಂದಕುಮಾರ ಮರ್ತೂರ 6901, ಕೌಶಲ್ಯ ಮಂಜುನಾಥ ಪಾಟೀಲ 7478, ಭರತಕುಮಾರ ಹಣಮಂತರಾವ್‌ 8569, ಸೌಮ್ಯ 8610, ಭಾಗ್ಯಶ್ರೀ 9834 ರ್‍ಯಾಂಕ್‌ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಚೇರ್ಮನ್‌ ಶಿವಾನಂದ ಖಜೂರ್ಗಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT