ಚಿಂಚೋಳಿ: ಇಲ್ಲಿನ ಚಂದಾಪುರದ ಗಂಗೂನಾಯಕ ತಾಂಡಾ ರಸ್ತೆಯಲ್ಲಿ ಕೊಳವೆಬಾವಿ ಬತ್ತಿ ಹೋಗಿದ್ದು ನೀರಿಲ್ಲದೇ ಜನ ಪರದಾಡುವಂತಾಗಿದೆ.

ಗೌಂಧಿಚೌಕ್ ಏರಿಯಾ, ಜುಮ್ಮಾ ಮಸೀದಿ ಏರಿಯಾ ಹಾಗೂ ಹೌಸಿಂಗ್ ಬೋರ್ಡ್ನ ಸರ್ಕಾರಿ ನೌಕರರ ವಸತಿ ಗೃಹಗಳು ಮತ್ತು ಆಶ್ರಯ ಕಾಲೋನಿಯ ಜನರು ನೀರಿಲ್ಲದೇ ಬಸವಳಿಯುವಂತಾಗಿದೆ.

ಚಂದಾಪುರಕ್ಕೆ ಶುದ್ಧೀಕರಿಸಿದ ನೀರು ಪೂರೈಸಿದರೂ ಜನ ಅದನ್ನು ಕುಡಿಯಲು ಬಳಸುವುದಿಲ್ಲ. ಹೀಗಾಗಿ ಹೆಚ್ಚಿನ ಜನರು ಕುಡಿಯುವ ನೀರಿಗೆ ಇದೇ ಕೊಳವೆ ಬಾವಿಗೆ ಅವಲಂಬಿತರಾಗಿದ್ದಾರೆ. ಆದರೆ ಎರಡು ತಿಂಗಳಿನಿಂದ ಕೊಳವೆ ಬಾವಿ ಕೆಟ್ಟು ನಿಂತಿದ್ದು ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಜನ ಖರೀದಿಸಿ ತಂದು ನೀರು ಕುಡಿಯುವ ದುಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮುಖಂಡ ಉಮೇಶ ಬೆಳಕೇರಿ, ಶೈಲೇಶ್ ದೂರಿದ್ದಾರೆ.

ಕೊಳವೆ ಬಾವಿ ಕೆಟ್ಟು ಹೋಗಿದ್ದರಿಂದ ನೀರಿಲ್ಲದೇ ಜನ ಕಂಗಾಲಾಗಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ಇದ್ದಾರೆ ಎಂಬುದು ಜನರು ಆರೋಪಿಸುತ್ತಿದ್ದಾರೆ.

ಆಶ್ರಯ ಕಾಲೋನಿಯ ಜನರು ನೀರಿಗಾಗಿ ತೊಂದರೆಗೆ ಒಳಗಾಗಿದ್ದಾರೆ. ಇಲ್ಲಿನ ಜನ ಖಾಸಗಿ ಟ್ಯಾಂಕರ್ಗಳಿಂದ ನೀರು ತರಿಸಿಕೊಂಡು ದಿನ ದೂಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ನಿಂದ ನೀರು ತರಿಸಿಕೊಳ್ಳುವ ಆರ್ಥಿಕ ಶಕ್ತಿ ಇಲ್ಲದವರು ತೊಂದರೆಗೆ ಸಿಲುಕಿದ್ದಾರೆ. ಅಧಿಕಾರಿಗಳು ಬೇಸಿಗೆಯಲ್ಲಿ 2 ತಿಂಗಳು ಕಾಲ ಹರಣ ಮಾಡಿದ್ದು ಏಕೆ ಎಂಬುದು ಜನರ ಪ್ರಶ್ನೆಯಾಗಿದೆ.

ಅಂಚೆ ಕಚೇರಿ ಬಳಿಯ ಕೊಳವೆ ಬಾವಿ ಬತ್ತಿದ್ದು ಅಲ್ಲಿ ಹೊಸದಾಗಿ ಕೊಳವೆ ಬಾವಿ ಕೊರತೆಯದೇ ವಿಧಿ ಇಲ್ಲದಂತಾಗಿದೆ. ಹೀಗಾಗಿ ಈಗಾಗಲೇ ಅಭಾವ ಪರಿಹಾರ ನಿಧಿಯಿಂದ ಅನುದಾನ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ. ವಾರದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.