ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಸನ್ನತಿ ಚಂದ್ರಲಾಂಬೆ ಜಾತ್ರೆ 16ರಿಂದ

Last Updated 14 ಏಪ್ರಿಲ್ 2022, 10:05 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಇದೇ 16ರಿಂದ ಅಂದರೆ ದವನದ ಹುಣ್ಣಿಮೆಯಿಂದ ಸಪ್ತಮಿಯವರೆಗೆ ಉತ್ಸವ ನಡೆಯಲಿದೆ. ಪಂಚಮಿಯ ದಿನವಾದ ಏ 21ರಂದು ರಥೋತ್ಸವ ಜರುಗಲಿದೆ.

ವಿಶೇಷವಾಗಿ ಚೌತಿ, ಪಂಚಮಿಯಂದು ಪ್ರವಚನ, ಕೀರ್ತನೆ, ದೇವರನಾಮ ಹೀಗೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಿತ್ಯ ಬೆಳಿಗ್ಗೆ ಕಾಕಡಾರತಿ, ನಂತರ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ ಮಹಾಮಂಗಳಾರತಿ ನೆರವೇರುವುದು. ನಂತರ ನೈವೇದ್ಯ ಹಾಗು ಅನ್ನಸಂತರ್ಪಣೆ ಜಲುಗುವುದು.

ಇದೇವೇಳೆ ಸಂಜೆ ತೊಟ್ಟಿಲು ಸೇವೆ ವಾಹನ ಸೇವೆ ಹಾಗೂ ಅರ್ಚಕ ವೃಂದದಿಂದ ಮಂತ್ರಪುಷ್ಪ ಸೇವೆ ಇರುತ್ತದೆ. ಭಕ್ತರು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT