ಶುಕ್ರವಾರ, ಆಗಸ್ಟ್ 12, 2022
27 °C

ಚಂದ್ರಂಪಳ್ಳಿ ಜಲಾಶಯ ಭರ್ತಿ, 200 ಕ್ಯುಸೆಕ್ ನೀರು ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗಿದೆ. ಜಲಾಶ ಯದ ಗರಿಷ್ಠ ಮಟ್ಟ 1617.40. ಸದ್ಯ ಜಲಾಶಯದ ನೀರಿನ ಮಟ್ಟ 1617.20 ಅಡಿ ತಲುಪಿದೆ. ಪ್ರಯುಕ್ತ ಗೇಟು ಎತ್ತಿ 200 ಕ್ಯುಸೆಕ್ ನೀರು ನದಿಗೆ ಬಿಡಲಾಗುವುದು ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಕೈಲಾಸ ತಿಳಿಸಿದರು.

ಜಲಾಶಯಕ್ಕೆ 130 ಕ್ಯುಸೆಕ್ ಒಳಹರಿವಿದೆ. ಹೀಗಾಗಿ ಸರನಾಲಾ ನದಿಗೆ ನೀರು ಬಿಡಲಾಗುವುದು. ಜಲಾಶಯದ ಕೆಳಭಾಗದ ಹಾಗೂ ನದಿದಂಡೆಯ ಹಳ್ಳಿಗಳ ಜನರು ಎಚ್ಚರಿಕೆಯಿಂದ ಇರಬೇಕು.

ಸರನಾಲಾ ನದಿಯು ಮುಲ್ಲಾಮಾರಿ ನದಿಯ ಉಪ ನದಿಯಾಗಿದೆ. ನದಿಗೆ ನೀರು ಬಿಡುವುದರಿಂದ ನದಿಯಲ್ಲಿ ಪ್ರವಾಹ ಉಂಟಾಗಲಿದೆ. ಹೀಗಾಗಿ ನದಿಯ ಇಕ್ಕೆಲಗಳ ಗ್ರಾಮಗಳ ರೈತರು ನದಿಗೆ ಇಳಿಯುವುದಾಗಲಿ, ಎತ್ತುಗಳನ್ನು ನದಿ ದಂಡೆಯಲ್ಲಿ ಕಟ್ಟುವುದಾಗಲಿ ಮಾಡಬಾರದು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.