‘ಪರಿವರ್ತನೆ ಜೀವಂತಿಕೆಯ ಲಕ್ಷಣ’

7
ಪ್ರವಚನ ಮುಕ್ತಾಯ ಸಮಾರಂಭ; ಅಕ್ಕ ಅನ್ನಪೂರ್ಣ ಅಭಿಮತ

‘ಪರಿವರ್ತನೆ ಜೀವಂತಿಕೆಯ ಲಕ್ಷಣ’

Published:
Updated:
Deccan Herald

ಕಲಬುರ್ಗಿ: ‘ಪರಿವರ್ತನೆ ಜೀವಂತಿಕೆಯ ಲಕ್ಷಣ. ಶರಣರ ತತ್ವದಲ್ಲಿ ನಡೆಯಬೇಕಾದರೆ ಅರಿವು- ಆಚಾರ ಎರಡೂ ಅನಿವಾರ್ಯ. ಇವುಗಳಿಂದ ಮಾತ್ರ ವ್ಯಕ್ತಿಯ ಜೀವನಕ್ಕೆ ಮುಕ್ತಿ ಸಿಗಲು ಸಾಧ್ಯ’ ಎಂದು ಬೀದರ್‌ನ ಅಕ್ಕ ಅನ್ನಪೂರ್ಣ ಹೇಳಿದರು.

ಜಯನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಶುಕ್ರವಾರ ಜರುಗಿದ ‘ವಚನ ಆಷಾಢ’ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪ್ರವಚನ ಆಯೋಜನೆ ಮಾಡಿದ್ದಕ್ಕೆ ಸಾರ್ಥಕತೆ ಬರುತ್ತದೆ. ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನವನ್ನು ಹಿಡಿಯಬೇಕು. ಜೀವ ಶಿವನಾದಾಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ, ವ್ಯಕ್ತಿ ಜೀವನ್ಮುಕ್ತನಾಗುತ್ತಾನೆ. ಆ ಮಹಾಲಿಂಗವೇ ಜೀವಾತ್ಮವಾಗಿ, ಈ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಒಂದಾಗುವ ಪ್ರಕ್ರಿಯೆಗೆ ಲಿಂಗಾಂಗ ಸಾಮರಸ್ಯ ಎನ್ನುತ್ತಾರೆ’ ಎಂದರು.

‘ಇಷ್ಟಲಿಂಗ ಯೋಗದಲ್ಲಿ ಎಲ್ಲ ಯೋಗಗಳ ಸಂಗಮವಿದೆ. ಇದನ್ನು ಶಿವಯೋಗವೆಂತಲೂ ಕರೆಯುತ್ತಾರೆ. ಈ ಶಿವಯೋಗದ ಮುಖಾಂತರ ಜೀವ ಶಿವನಾಗುವ ಹೆದ್ದಾರಿ ಅಡಗಿದೆ’ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಜಗನ್ನಾಥ ಪಾಟೀಲ ಮಾತನಾಡಿ, ‘ಬಸವ ಸಂದೇಶಗಳು ವಿಶ್ವಮಾನ್ಯ ಸಂದೇಶಗಳು. ಅವರ ವಚನಗಳ ಸಾರವನ್ನು ಜಗತ್ತಿನ ಮೂಲೆ ಮೂಲೆಗೆ ಕೊಂಡೊಯ್ಯವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಕೇಂದ್ರ ಬಸವ ಸಮಿತಿ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ ಮಾತನಾಡಿ, ‘ಶರಣರ ಜೀವನ ಮಾದರಿ ಜೀವನ. ಶರಣರು ನುಡಿದಂತೆ ನಡೆದು ಜೀವನ್ಮುಕ್ತರಾಗಿ ನಮಗೆ ಆದರ್ಶ ಪ್ರಾಯರಾಗಿದ್ದಾರೆ’ ಎಂದರು.

ಒಂದು ತಿಂಗಳ ಪರ್ಯಂತ ನಡೆದ ವಚನ ಆಷಾಢ ಪ್ರವಚನಕ್ಕೆ ಸಹಕರಿಸಿದ ಸರ್ವ ಕಾಯಕ ಜೀವಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಬೆಂಗಳೂರಿನ ಕೇಂದ್ರ ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಹನುಮಂತರೆಡ್ಡಿ ಮುದ್ನಾಳ, ಬಸವ ಟಿವಿ ಸಂಸ್ಥಾಪಕ ಇ.ಕೃಷ್ಣಪ್ಪ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ದತ್ತಿ ದಾಸೋಹಿ ಚೆನ್ನಮಲ್ಲಪ್ಪ ಬೆನಕಳ್ಳಿ ಇದ್ದರು.

ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !