ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಖಾಪುರದಿಂದ 600 ಜನ ಭಾಗಿ

ಶ್ರೀಶೈಲ ಶ್ರೀಗಳ ಜನ್ಮ ಸುವರ್ಣ ಮಹೋತ್ಸವ
Last Updated 11 ಜನವರಿ 2023, 6:34 IST
ಅಕ್ಷರ ಗಾತ್ರ

ಜೇವರ್ಗಿ: ಶ್ರೀಶೈಲ ದಚನ್ನಸಿದ್ಧರಾಮ ಸ್ವಾಮೀಜಿಗಳ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಖಾಪುರದಿಂದ 600 ಜನ ಭಕ್ತಾದಿಗಳು ಭಾಗಿಯಾಗಲಿದ್ದಾರೆ ಎಂದು ಶಖಾಪುರ ತಪೋವನಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಶಖಾಪುರ (ಎಸ್.ಎ) ಗ್ರಾಮದ ವಿಶ್ವಾರಾಧ್ಯ ತಪೋವನಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.13 ರಂದು ಶ್ರೀಶೈಲ ಶ್ರೀಗಳ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಶೈಲ, ಉಜ್ಜಯಿನಿ, ಹಾಗೂ ಕಾಶಿಯ ಹಿರಿಯ, ಕಿರಿಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಾಗವಹಿಸಲು ಶಖಾಪುರ ವಿಶ್ವಾರಾಧ್ಯರ ತಪೋವನ ಮಠದಿಂದ ವಿವಿಧ ಕಲಾ ತಂಡಗಳು, ವಾದ್ಯ ಮೇಳಗಳೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಾಗವಹಿಸಲಿವೆ. ಸರ್ಕಾರಿ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೂಲಕ ಜ.12ರಂದು ಗುರುವಾರ ಸಂಜೆ 6 ಗಂಟೆಗೆ ಶಖಾಪುರದಿಂದ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು
ಹೇಳಿದರು.

ಪಾಳಾದ ಗುರುಮೂರ್ತಿ ಶಿವಾ ಚಾರ್ಯ, ಗಡಿ ಗೌಡಗಾಂವ್‌ದ ಶಾಂತವೀರ ಶಿವಾಚಾರ್ಯ, ವಿಜಯ ಕುಮಾರ ಸ್ವಾಮೀಜಿ ಸೇರಿದಂತೆ ನಾಡಿನ ಮಠಾಧೀಶರು ಶ್ರೀಶೈಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT