ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಂದು ಭೈರಾಮಡಗಿ ಕಾಲಭೈರವ ರಥೋತ್ಸವ

Last Updated 7 ಏಪ್ರಿಲ್ 2022, 15:26 IST
ಅಕ್ಷರ ಗಾತ್ರ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಭೈರಾಮಡಗಿ ಗ್ರಾಮದ ಕಾಲಭೈರವ ಜಾತ್ರಾ ಮಹೋತ್ಸವದ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಿದ್ದು, ಏ. 11ರಂದು ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ.

ಕಳೆದ ಏ 2ರಿಂದ ವಿಜಯಪುರ ಸಿದ್ದೇಶ್ವರ ಆಶ್ರಮದ ಗುರುಲಿಂಗ ಸ್ವಾಮೀಜಿ ಅವರಿಂದ ಅಧ್ಯಾತ್ಮಿಕ ಪ್ರವಚನ ಆರಂಭವಾಗಿದೆ. ಶಿವಕುಮಾರ್ ಜಾಲಹಳ್ಳಿ ಹಾಗೂ ಸಿದ್ದಣ್ಣಾ ದೇಸಾಯಿ ಕಲ್ಲೂರ ಅವರಿಂದ ಸಂಗೀತ ಸೇವೆ ನಡೆಯುತ್ತಿದೆ.

ಏ 10ರಂದು ಸಂಜೆ 6ಕ್ಕೆ ಉಚ್ಚಾಯಿ ಜರುಗಲಿದ್ದು, ತದನಂತರ ರಾತ್ರಿ 10ಕ್ಕೆ ಪಟ್ಟದ ಪುರವಂತರಿಂದ ಅಗ್ನಿ ಪುಟು ನಡೆಯುವುದು.

ಏ. 11ರಂದು ಬೆಳಿಗ್ಗೆ ಕಾಲಭೈರವೇಶ್ವರ ಮತ್ತು ರಾಮಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾ ರುದ್ರಾಭೀಷೇಕ, ಪುರವಂತರಿಂದ ಅಗ್ಗಿ ಪ್ರವೇಶ ಜರುಗುವುದು.‌ ಬೆಳಿಗ್ಗೆ 11ರಿಂದ ಗ್ರಾಮದ ಮಹಾಂತೇಶ್ವರ ವಿರಕ್ತ ಮಠದಿಂದ ಪಲ್ಲಕ್ಕಿ ಕಳಸ, ನಂದಿಕೋಲ, ಕುಂಭ ಸಕಲ ವಾದ್ಯ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಸಂಜೆ ಮಂದಿರಕ್ಕೆ ತಲುಪುವುದು.‌ ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ.‌ ಸಂಜೆ 7ಕ್ಕೆ ಸಂಗೀತ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಲಭೈರವ ಸದ್ಭಕ್ತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT