ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಮ್ಮನಚೋಡ: ಬಸ್ ನಿಲ್ದಾಣ ಉದ್ಘಾಟನೆ

ಶತಾಯುಷಿ ಶಾಂತಲಿಂಗಪ್ಪ ರಗಟೆಯವರಿಂದ ಭೂದಾನ
Last Updated 14 ಜನವರಿ 2022, 6:39 IST
ಅಕ್ಷರ ಗಾತ್ರ

ಚಿಂಚೋಳಿ: ‘ನಾನು ಕಡಿಮೆ ಮಾತು, ಹೆಚ್ಚು ಕೆಲಸವೇ ನನ್ನ ಗುಣ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೇ ನನ್ನ ಮಾತುಗಳು’ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದರು.

ತಾಲ್ಲೂಕಿನ ಚಿಮ್ಮನಚೋಡದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಉದ್ಘಾಟಿಸಿ ಹಾಗೂ ಭೂದಾನಿಗಳಾದ ಶತಾಯುಷಿ ಶಾಂತಲಿಂಗಪ್ಪ ರಗಟೆ ಅವರನ್ನು ಸನ್ಮಾನಿಸಿ ಗುರುವಾರ ಮಾತನಾಡಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಬಸ್ ನಿಲ್ದಾಣಕ್ಕೆ ಜಾಗವಿರಲಿಲ್ಲ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ 10 ಗುಂಟೆ ಜಮೀನನ್ನು ಶತಾಯುಷಿ ಶಾಂತಲಿಂಗಪ್ಪ ರಗಟೆ ಹಾಗೂ ಅವರ ಪುತ್ರ ನನ್ನ ಸ್ನೇಹಿತ ಡಾ. ಚಂದ್ರಪ್ರಕಾಶ ರಗಟೆ ದಾನದ ರೂಪದಲ್ಲಿ ನೀಡಿದ್ದಾರೆ. ಇದು ಅವರು ಸಮಾಜಕ್ಕೆ ಮರಳಿ ಕೊಡುತ್ತಿರುವ ಕೊಡುಗೆ ಎಂದು ಶ್ಲಾಘಿಸಿದರು.

ಡಾ. ಚಂದ್ರಪ್ರಕಾಶ ರಗಟೆ, ಭೂದಾನಿಗಳಾದ ಶತಾಯುಷಿ ಶಾಂತಲಿಂಗಪ್ಪ ರಗಟೆ, ಮುಖಂಡರಾದ ಜಗದೀಶ ಮರಪಳ್ಳಿ ಮಾತನಾಡಿದರು.

ರೇಕುಳಗಿಯ ಎಲ್.ಬಿ ರೆಡ್ಡಿ ಗುರೂಜಿ ಸಾನಿಧ್ಯವಹಿಸಿದ್ದರು. ಡಿವೈಎಸ್ಪಿ ಬಸವೇಶ್ವರ ಹಿರಾ, ಇಒ ಅನಿಲಕುಮಾರ ರಾಠೋಡ್, ಕೃಷ್ಣಾ ಅಗ್ನಿಹೋತ್ರಿ, ಆನಂದ ಕಟ್ಟಿ, ಅಹೆಮದ್ ಹುಸೇನ್, ಗ್ರಾ.ಪಂ. ಅಧ್ಯಕ್ಷೆ ಜಿಮ್ಮಿಬಾಯಿ ಮೋತಿರಾಮ ನಾಯಕ, ಈಶ್ವರಸಿಂಗ್ ಠಾಕೂರ, ಪ್ರಭಾಕರರಾವ್ ಕುಲಕರ್ಣಿ, ಶಾಮರಾವ್ ರಾಠೋಡ್, ಅಲ್ಲಮಪ್ರಭು ಹುಲಿ, ಗೌತಮ ಪಾಟೀಲ, ದಿವಾಕರರಾವ್ ಜಹಾಗಿರದಾರ, ಲಕ್ಷ್ಮಣ ಆವುಂಟಿ, ಶರಣರೆಡ್ಡಿ ಮೊಗಲಪನೋರ್, ವಿಶ್ವನಾಥರೆಡ್ಡಿ, ಬಂಡಾರೆಡ್ಡಿ, ರಾಮರೆಡ್ಡಿ ಪಾಟೀಲ, ಶಾಂತರೆಡ್ಡಿ ನರನಾಳ್, ಜಗನ್ನಾಥ ತೆಲ್ಕಾಪಳ್ಳಿ ಇದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ ಚಂಡ್ರಗಿ ಸ್ವಾಗತಿಸಿದರು. ವೀರಭದ್ರಪ್ಪ ನಿರೂಪಿಸಿದರು. ಶಾಖಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು.

ಅಭಿವೃದ್ಧಿಗೆ 8 ಕೋಟಿ: ಚಿಮ್ಮನಚೋಡ ಗ್ರಾಮದಿಂದ ಗುಂಪಾ ಮಧ್ಯೆ ₹1.34 ಕೋಟಿ ಮೊತ್ತದಲ್ಲಿ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ, ಸಾಲೇಬೀರನಹಳ್ಳಿ ಕೊಳ್ಳೂರು ರಸ್ತೆಗೆ ₹5 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ, ₹50 ಲಕ್ಷ ಮೊತ್ತದ ಬಸ್ ನಿಲ್ದಾಣದ ಕೂಡು ರಸ್ತೆ ಮತ್ತು ಚರಂಡಿ, ₹60 ಲಕ್ಷ ವೆಚ್ಚದ ಶಾಲಾ ಕೊಠಡಿಗಳು ಹಾಗೂ ₹60ಲಕ್ಷ ಮೊತ್ತದ ಬಸ್ ನಿಲ್ದಾಣ ಕಟ್ಟಡ ಉದ್ಘಾಟಿಸಲಾಯಿತು.

ಬುಲೆಟ್ ರೈಲು ಕನಸು ನನಸಾಗಿಸಲು ಪ್ರಯತ್ನ: ಪ್ರಜಾವಾಣಿ ವರದಿ ಉಲ್ಲೇಖಿಸಿದ ಸಂಸದ ಉಮೇಶ ಜಾಧವ ಅವರು ಮುಂಬಯಿ ಹೈದರಾಬಾದ ಹೈಸ್ಪೀಡ್ ಕಾರಿಡಾರ್ ಯೋಜನೆ ಅಡಿಯಲ್ಲಿ ಬುಲೆಟ್ ಟ್ರೇನ್ ಚಿಂಚೋಳಿ ತಾಲ್ಲೂಕಿನಿಂದ ಹಾದುಹೋಗುವಂತೆ ಮಾಡಲು ನಾನು ಮತ್ತು ತೆಲಂಗಾಣದ ಸಂಸದ ಬಿ.ವಿ ಪಾಟೀಲ ಪ್ರಯತ್ನ ನಡೆಸುತ್ತಿದ್ದೇವೆ. ಫಲ ಸಿಗುವ ವಿಶ್ವಾಸವಿದೆ
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT