ಚಿಂಚೋಳಿ: ತಾಲ್ಲೂಕಿನ ರಾಯಕೋಡ ಗ್ರಾಮದಲ್ಲಿ ನೂರಾರು ಎಕರೆ ಹೊಲದಲ್ಲಿ ತೊಗರಿಗೆ ಬೆಳೆಗೆ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ಸೇಡಂನ ರೈತರೊಬ್ಬರಿಂದ ತಂದು ಕಳೆದ ವರ್ಷ ತೊಗರಿ ಬೆಳೆದ ರೈತರು ಪ್ರಸಕ್ತ ವರ್ಷವೂ ಅದೇ ಬೀಜಗಳನ್ನು ಮರು ಬಳಕೆ ಮಾಡಿದ್ದಾರೆ. ಆದರೆ ತೊಗರಿ ಬೆಳೆ ಈವರೆಗೂ ಹೂವು ಬಿಡದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಆಶಾ ತಳಿಯ ತೊಗರಿ ಬೀಜ ಬಿತ್ತನೆ ನಡೆಸಿದ ರೈತರು ಈಗ ಬೆಳೆ ಹೂವು ಮೊಗ್ಗು ಬಿಡದೇ ಲಕ್ಕಿಯಂತೆ ಬೆಳೆಯುತ್ತಿರುವುದನ್ನು ಕಂಡು ಪರಿತಪಿಸುವಂತಾಗಿದೆ.

ಗ್ರಾಮದ 26 ರೈತರಿಗೆ ಸೇರಿದ 110 ಎಕರೆ ಜಮೀನಿನಲ್ಲಿ ಬಿತ್ತನೆ ನಡೆಸಿದ ಹೊಲದಲ್ಲಿ ತೊಗರಿ ಬೆಳೆ ಗೊಡ್ಡು ರೋಗಕ್ಕೆ ತುತ್ತಾಗಿದೆ ಎಂದು ರೈತರು ತಿಳಿಸಿದ್ದಾರೆ.

ಕೆಲವು ರೈತರು ಈಗಾಗಲೇ ರಸಾಯನಿಕ ಕೂಡ ಸಿಂಪಡಣೆ ನಡೆಸಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಿಲ್ಲ ಎಂಬ ಸುದ್ದಿ ತಿಳಿದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಅಭಿಲಾಷ ಸುಬೇದಾರ, ಗುರುಪಾದಪ್ಪ ಮತ್ತು ರಘುವೀರ ವಿಶ್ವಕರ್ಮ ಅವರು ಭೇಟಿ ನೀಡಿ ಪ್ರಾಥಮಿಕವಾಗಿ ಪರಿಶೀಲಿಸಿದ್ದಾರೆ. ಇದು ಮೇಲ್ನೋಟಕ್ಕೆ ಗೊಡ್ಡು ರೋಗ ಎಂದು ಹೇಳಿದ್ದಾರೆ.

ಈ ಕುರಿತು ಕೃಷಿ ವಿಜ್ಞಾನಿಗಳಿಗೆ ತಿಳಿಸಲಾಗಿದೆ. ಸೋಮವಾರ ವಿಜ್ಞಾನಿಗಳು ಬೆಳೆ ವೀಕ್ಷಿಸಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದರು. ಎರಡು ವರ್ಷಗಳ ಹಿಂದೆ ರಾಯಕೋಡ ಹಾಗೂ ಸುತ್ತಲಿನ ಗ್ರಾಮಗಳ ಹೊಲದಲ್ಲಿ ಶಂಕು ಹುಳಗಳ ಬಾಧೆ ಕಂಡು ಬಂದಿತ್ತು. ಇದರಿಂದ ಹಲವು ರೈತರು ಹರಗಿ ಬಿತ್ತನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.