ಚಿಂಚೋಳಿ: ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಚಂದನಮಹಾದೇವಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ದೇವಿಯ ಮೂರ್ತಿಯ ಹಾಗೂ ಮಹಿಳೆಯರಿಂದ ಕುಂಭ ಕಳಸದ ಭವ್ಯ ಮೆರವಣಿಗೆ ಶನಿವಾರ ನಡೆಯಿತು.

ಗ್ರಾ.ಪಂ. ಕಚೇರಿ ಕಟ್ಟಡದ ಸಮೀಪವಿರುವ ಚಂದನಮಹಾದೇವಿ ದೇವಾಲಯದಿಂದ ದೇವಿಯ ಮೂರ್ತಿ ಮುಖ್ಯ ಬೀದಿಗಳಲ್ಲಿ ಸ್ಥಳೀಯ ಭೃಂಗಿಪಾಚೇಶ್ವರ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ನಂತರ ದೇವಿಗೆ ಜಲಧಿವಾಸ( ನೀರೊಳಗೆ) ಇರಿಸಲಾಯಿತು.

ಕುಂಭಕಳಸದ ಮೆರವಣಿಗೆ ನಂತರ ನಡೆದ ನಡೆದ ಕಾರ್ಯಕ್ರಮದಲ್ಲಿ ದತ್ತಾತ್ರೆಯ ರಾಯಗೋಳ, ಶರಣಗೌಡ ಪಾಟೀಲ ಹಣಮಗೊಂಡ, ಸಿದ್ದಣ್ಣಗೌಡ ಪಾಟೀಲ ಸಿನಗೊಂಡ, ರಾಮರಾವ್ ಪಾಟೀಲ, ಕುಪೇಂದ್ರ ಫತೆಪುರ, ಬಸವರಾಜ ಪಾಟೀಲ ಯಲಗೊಂಡ, ಜಗದೀಶ ಪಾಟೀಲ ಯಲಗೊಂಡ, ವಿಶ್ವನಾಥ ಪಡಶೆಟ್ಟಿ, ಬಾಬುರಾವ ಭೂಂಯಾರ, ವೀರಭದ್ರಪ್ಪ ಸಿರಂಜಿ, ಭವಾನಿ ಫತೆಪುರ, ಸಿದ್ದಣ್ಣ ಮಾಸ್ತರ ವಟವಟಿ, ಕಮಲಾಕರ ಕಡಗದ, ಶರಣಪ್ಪ ಕಡಗದ, ಬಾಬುರಾವ್ ಸಿರಂಜಿ, ಬಸವರಾಜ ಕೋಲಕುಂದಿ, ಹಣಮಂತರಾವ್ ಪಾಣಿ, ವೀರಯ್ಯ ಸ್ವಾಮಿ, ಕಾರ್ತಿಕ ಮಂತ್ರಿ ಹಾಗೂ ಚಂದನಕೇರಾದ ಅಕ್ಕನ ಬಳಗ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಸದಸ್ಯೆಯರು ಪಾಲ್ಗೊಂಡಿದ್ದರು.

‘ಭಾನುವಾರದಿಂದ ಮಂಗಳವಾರದವರೆ ನವ ಧಾನ್ಯಗಳು, ವಸ್ತ್ರ(ಬಟ್ಟೆ) ಮತ್ತು ಪುಷ್ಪಗಳಲ್ಲಿ ವಾಸ ಮಾಡುವ ತಾಯಿಯ ಮೂರ್ತಿ ಮಂಗಳವಾರ ದೇವಾಲಯದಲ್ಲಿ ಧಾರ್ಮಿಕ ವಿಧಿಗಳನುಸಾರ ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಮತ್ತು ಧರ್ಮ ಸಭೆ ನಡೆಯಲಿದೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ದತ್ತಾತ್ರೆಯ ರಾಯಗೋಳ ತಿಳಿಸಿದ್ದಾರೆ.

ಇದರ ಜತೆಗೆ ದೆವಾಲಯದಲ್ಲಿ ಚಂಡಿಹೋಮ, ಗಣಹೋಮ ಹಾಗೂ ನವಗ್ರಹ ಪೂಜೆ ಮೊದಲಾದ ಕೈಂಕರ್ಯಗಳು ನಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-31-833872449

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.