ಚಿಂಚೋಳಿ: ತಾಲ್ಲೂಕಿನ ಕಲ್ಲೂರು-ಭಕ್ತಂಪಳ್ಳಿ ಮಧ್ಯೆ ಸ್ಥಾಪನೆಯಾಗಿರುವ ಚೆಟ್ಟಿನಾಡ ಸಿಮೆಂಟ್ ಕಂಪನಿ ವಿರುದ್ಧ ಬುಧವಾರ ಜೆಡಿಎಸ್ ಕಾರ್ಯಕರ್ತರು ಕಲ್ಲೂರು ಗ್ರಾಮದಲ್ಲಿ ಧರಣಿ ನಡೆಸಿದರು.

ಚೆಟ್ಟಿನಾಡ ಸಿಮೆಂಟ್ ಕಂಪನಿ ಉದ್ಯೋಗಿಗಳ ಮಕ್ಕಳಿಗೆ ಹಾಗೂ ದತ್ತು ಗ್ರಾಮಗಳ ರೈತರ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆ ತೆರೆದಿಲ್ಲ. ತಕ್ಷಣ ಶಾಲೆ ತೆರೆಯಲು ಕ್ರಮ ಕೈಗೊಳ್ಳಬೇಕು. ಸಿಎಸ್ಆರ್ ಅಡಿಯಲ್ಲಿ ನಿಯಮಾನುಸಾರ ಮೂಲಸೌಕರ್ಯ ಕಾಮಗಾರಿಗಳು ಕೈಗೊಳ್ಳಬೇಕು. ನಿಗದಿತ ಪ್ರಮಾಣದ ಗಣಿಗಾರಿಕೆ ನಡೆಸಬೇಕು. ಕಂಪನಿಗೆ ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ರವಿಶಂಕರ್ ರೆಡ್ಡಿ ಮುತ್ತಂಗಿ, ಮುಖಂಡರಾದ ಹಣಮಂತ ಪೂಜಾರಿ, ಸಿದ್ದಯ್ಯ ಸ್ವಾಮಿ ಕಪೂರ, ಮಂಜೂರು ಅಹಮದ್, ತಿಪ್ಪಣ್ಣ,ವೆಂಕಟಮ್ಮ, ಚಿತ್ರಮ್ಮ, ಜಗನ್ನಾಥ, ಫಯಾಜುದ್ದಿನ್, ರೇಣುಕಾ, ಜಗಮ್ಮಾ, ಶಶಿಕಲಾ ಮೊದಲಾದವರು ಇದ್ದರು.

ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಮನವಿ ಸ್ವೀಕರಿಸಿದರು. ಕಂದಾಯ ನಿರೀಕ್ಷಕ ಕೇಶವ ಕುಲಖರ್ಣಿ, ಕಂಪೆನಿಯ ವ್ಯವಸ್ಥಾಪಕರಾದ ಸಂದೀಪರೆಡ್ಡಿ, ಪ್ರಭಾಕರರೆಡ್ಡಿ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-31-163100375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.